alex Certify ಭರ್ಜರಿ ಗೆಲುವಿನೊಂದಿಗೆ ಚೊಚ್ಚಲ ಪ್ರವೇಶದಲ್ಲೇ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಗುಜರಾತ್ ಟೈಟಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗೆಲುವಿನೊಂದಿಗೆ ಚೊಚ್ಚಲ ಪ್ರವೇಶದಲ್ಲೇ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಗುಜರಾತ್ ಟೈಟಾನ್ಸ್

ಅಹಮದಾಬಾದ್ ನನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ 15 ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಿದೆ. ಐಪಿಎಲ್ ಪ್ರವೇಶಿಸಿದ ಚೊಚ್ಚಲ ಪ್ರಯತ್ನದಲ್ಲೇ ಗುಜರಾತ್ ಟೈಟಾನ್ಸ್ ಫೈನಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 7 ವಿಕೆಟ್ ಜಯಗಳಿಸಿದೆ ಆಲ್ ರೌಂಡ್ ಆಟವಾಡಿದ ನಾಯಕ ಹಾರ್ದಿಕ್ ಪಾಂಡ್ಯ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ನಿರ್ಣಾಯಕ ಪಂದ್ಯದಲ್ಲಿ ವೈಫಲ್ಯ ಕಂಡಿತು. 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. ಜೈಸ್ವಾಲ್ 22, ಬಟ್ಲರ್ 39, ಸ್ಯಾಮ್ಸನ್ 14, ಹೆಟ್ಮೈಯರ್ 11, ಆರ್. ಅಶ್ವಿನ್ 6, ರಿಯಾನ್ 15 ರನ್ ಗಳಿಸಿದರು. ಗುಜರಾತ್ ಪರವಾಗಿ ಹಾರ್ದಿಕ್ ಪಾಂಡ್ಯ 3 ವಿಕೆಟ್, ಸಾಯಿಕಿಶೋರ್ 2 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ್ದ ಗುಜರಾತ್ ತಂಡ 18.1 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ವೃದ್ಧಿಮಾನ್ ಸಹಾ 5, ಶುಭಮನ್ ಗಿಲ್ ಅಜೇಯ 45, ಮ್ಯಾಥ್ಯೂ ವೇಡ್ 8, ಹಾರ್ದಿಕ್ ಪಾಂಡ್ಯ 34, ಡೇವಿಡ್ ಮಿಲ್ಲರ್ ಅಜೇಯ 32 ರನ್ ಗಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...