alex Certify ಫಾರ್ಮುಲಾ 1 ರೇಸ್ ನಲ್ಲಿ ಪ್ರಮಾದ: ಭಾರೀ ಅಪಘಾತದಲ್ಲಿ ಅದೃಷ್ಟವಶಾತ್ ಸ್ಟಾರ್ ರೇಸರ್ ಗಳು ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಾರ್ಮುಲಾ 1 ರೇಸ್ ನಲ್ಲಿ ಪ್ರಮಾದ: ಭಾರೀ ಅಪಘಾತದಲ್ಲಿ ಅದೃಷ್ಟವಶಾತ್ ಸ್ಟಾರ್ ರೇಸರ್ ಗಳು ಪಾರು

ಎಫ್ 1 ಇಟಾಲಿಯನ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಅಪಘಾತ ಸಂಭವಿಸಿದ್ದು, ಹ್ಯಾಮಿಲ್ಟನ್ ಅವರ ಕಾರಿಗೆ ವರ್ಸ್ಟಾಪೆನ್ ಕಾರ್ ಡಿಕ್ಕಿ ಹೊಡೆದಿದೆ.

ಮ್ಯಾಕ್ಸ್ ವರ್ಸ್ಟಾಪೆನ್ ಅವರ ಕಾರು ಮೊದಲು ಲೂಯಿಸ್ ಹ್ಯಾಮಿಲ್ಟನ್‌ನ ಪಕ್ಕದಲ್ಲಿ ಬಂದಿದ್ದು, ಜಲ್ಲಿಕಲ್ಲುಗಳಿಗೆ ಉಜ್ಜಿ ಜಖಂಗೊಂಡಿದೆ. ಇಬ್ಬರೂ ಚಾಲಕರು ತಮ್ಮ ತಮ್ಮ ಕಾರುಗಳಿಂದ ಸುರಕ್ಷಿತವಾಗಿ ಹೊರಬಂದಿದ್ದು, ಸುರಕ್ಷತಾ ಸಿಬ್ಬಂದಿ ತಕ್ಷಣವೇ ಕ್ರಮಕೈಗೊಂಡಿದ್ದರಿಂದ ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.

ಮೊನ್ಜಾದಲ್ಲಿ ಭಾನುವಾರ ನಡೆದ ಇಟಾಲಿಯನ್ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಫಾರ್ಮುಲಾ ಒನ್ ಪ್ರಶಸ್ತಿ ಪ್ರತಿಸ್ಪರ್ಧಿಗಳಾದ ಲೂಯಿಸ್ ಹ್ಯಾಮಿಲ್ಟನ್ ಮತ್ತು ಮ್ಯಾಕ್ಸ್ ವರ್ಸ್ಟಾಪೆನ್ ಮುಖಾಮುಖಿಯಾಗಿದ್ದಾರೆ. ಇಬ್ಬರ ಕಾರ್ ಒಂದೇ ಸಮಯಕ್ಕೆ ಬಂದಿದ್ದು, ಈ ಹಂತದಲ್ಲಿ ಅಪಘಾತ ಸಂಭವಿಸಿದೆ. ಹ್ಯಾಮಿಲ್ಟನ್ ಮುನ್ನಡೆ ಸಾಧಿಸಿ ವರ್ಸ್ಟಾಪೆನ್‌ಗೆ ಸಮನಾದ ಟ್ರ್ಯಾಕ್‌ಗೆ ಮರಳಿದ್ದಾರೆ. ಮರ್ಸಿಡಿಸ್‌ನ 7 ಬಾರಿಯ ವಿಶ್ವ ಚಾಂಪಿಯನ್ ಹ್ಯಾಮಿಲ್ಟನ್ ರೆಡ್ ಬುಲ್‌ನ ಚಾಂಪಿಯನ್‌ಶಿಪ್ ನಾಯಕನೊಂದಿಗೆ ಪುನರಾಗಮನ ಮಾಡಿದ್ದಾರೆ. ಆದರೆ ರೇಸ್ ವೇಳೆಯಲ್ಲೇ ಎರಡೂ ಕಾರುಗಳು ಡಿಕ್ಕಿಯಾಗಿವೆ. ಇದರಿಂದ ಅವರು ಹೊರಗುಳಿಯುವಂತಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...