alex Certify ಅಸಭ್ಯ ಭಾಷೆಯಲ್ಲಿ ಮಾತನಾಡಿದ ಪಾಕ್‌ ಆಟಗಾರನಿಗೆ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಸಭ್ಯ ಭಾಷೆಯಲ್ಲಿ ಮಾತನಾಡಿದ ಪಾಕ್‌ ಆಟಗಾರನಿಗೆ ದಂಡ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್‌ ಪಂದ್ಯವೊಂದರ ವೇಳೆ ಅಸಭ್ಯ ಭಾಷೆಯಲ್ಲಿ ಮಾತನಾಡಿದ ಕಾರಣಕ್ಕೆ ಪಂದ್ಯದ ಶುಲ್ಕದ ಶೇ.35ರಷ್ಟನ್ನು ದಂಡದ ರೂಪದಲ್ಲಿ ಕಡಿತ ಮಾಡಲಾಗುತ್ತಿದೆ.

ಇಲ್ಲಿನ ಸಿಂಧ್ ಪ್ರಾಂತ್ಯದ ತಂಡ ನಾಯಕರಾದ ಸರ್ಫರಾಜ್ ಅಹ್ಮದ್, ಕಾಯಿಡ್‌-ಎ-ಆಜಾಮ್ ಟ್ರೋಫಿಗೆ ಆಡುತ್ತಿರುವ ಟೂರ್ನಿಯ ಪಂದ್ಯವೊಂದರ ವೇಳೆ ಅಂಪೈರ್‌ಗಳ ವಿರುದ್ಧ ಅಸಮಾಧಾನ ತೋಡಿಕೊಳ್ಳುವ ವೇಳೆ ಪದೇ ಪದೇ ಅಸಹನೀಯವಾದ ಕಾಮೆಂಟ್‌ಗಳ್ನು ಮಾಡಿದ ಆಪಾದನೆ ಎದುರಿಸುತ್ತಿದ್ದಾರೆ.

ಈ ಘಟನೆಯಲ್ಲಿ ಪಂದ್ಯದ ಅಂಪೈರ್‌‌ಗಳಾದ ಫೈಸಲ್ ಅಫ್ರಿದಿ ಹಾಗೂ ಸಾಕಿಬ್ ಖಾನ್‌ ವರದಿ ಮಾಡಿದ್ದು, ಆಟದ ಮೈದಾನದಲ್ಲಿ ಆಟಗಾರರು ವರ್ತಿಸಬೇಕಾದ ನಿಯಮಾವಳಿಯ ಉಲ್ಲಂಘನೆ ಮಾಡಿದ ಕಾರಣ ದಂಡ ವಿಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...