alex Certify BIG NEWS: ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಸರ್ಕಾರದ ಖಡಕ್ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಸರ್ಕಾರದ ಖಡಕ್ ಎಚ್ಚರಿಕೆ

ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿ ಕಠಿಣ ಕೋವಿಡ್ ನಿಯಮ ಪಾಲಿಸಲಾಗುತ್ತಿದ್ದು, ಕ್ವಾರಂಟೈನ್ ಗೆ ಹಿಂದೇಟು ಹಾಕುತ್ತಿರುವ ಟೀಂ ಇಂಡಿಯಾ ಆಟಗಾರರಿಗೆ ಕ್ವೀನ್ಸ್ ಲೆಂಡ್ ಸರ್ಕಾರ ಖಡಕ್ ಎಚ್ಚರಿಕೆಯನ್ನು ನೀಡಿದೆ.

ಈಗಾಗಲೇ ಆಸ್ಟ್ರೇಲಿಯಾದಲ್ಲಿ ಏಕದಿನ, ಟಿ-20, ಎರಡು ಟೆಸ್ಟ್ ಸರಣಿ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ, ಕೊನೆಯ ಟೆಸ್ಟ್ ಪಂದ್ಯವನ್ನು ಕ್ವೀನ್ಸ್ ಲೆಂಡ್ ನ ಬ್ರಿಸ್ಬೇನ್ ನಲ್ಲಿ ಆಡಲಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಅಲ್ಲಿನ ಕೊರೊನಾ ನಿಯಮ ಪಾಲಿಸಲೇಬೇಕಾಗಿದೆ. ಆದರೆ ಇದಕ್ಕೆ ಆಟಗಾರರು ಒಪ್ಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈಗಾಗಲೇ ದುಬೈನಲ್ಲಿ 14 ದಿನ ಕ್ವಾರಂಟೈನ್ ಆಗಿದ್ದು, ಆಸ್ಟ್ರೇಲಿಯಾಗೆ ಬಂದ ಬಳಿಕವೂ 14 ದಿನ ಕ್ವಾರಂಟೈನ್ ಆಗಿದ್ದೇವೆ. ಇದೀಗ ಬ್ರಿಸ್ಬೇನ್ ನಲ್ಲಿಯೂ ಮತ್ತೆ ಕ್ವಾರಂಟೈನ್ ಗೆ ಒಳಪಡಬೇಕು ಎಂದರೆ ಅದು ಸುಲಭ ಸಾಧ್ಯವಲ್ಲ ಎಂದು ಟೀಂ ಇಂಡಿಯಾ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕ್ವೀನ್ಸ್ ಲೆಂಡ್ ಆರೋಗ್ಯ ಸಚಿವೆ ರೋಸ್ ಬೇಟ್ಸ್, ಕೊರೊನಾ ನಿಯಮವನ್ನು ಎಲ್ಲರೂ ಪಾಲಿಸಲೇಬೇಕು. ಒಂದು ವೇಳೆ ನಿಯಮ ಪಾಲಿಸುವುದಿಲ್ಲ ಎಂದಾದರೆ ಟೀಂ ಇಂಡಿಯಾ ಆಟಗಾರರು ಬರುವುದೇ ಬೇಡ ಎಂದು ಸಂದೇಶ ರವಾನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...