alex Certify ವಿರೋಧಿಗಳ ಟೀಕೆಗೆ ತಕ್ಕ ಉತ್ತರ ನೀಡಿದ ಧೋನಿ ಫ್ಯಾನ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರೋಧಿಗಳ ಟೀಕೆಗೆ ತಕ್ಕ ಉತ್ತರ ನೀಡಿದ ಧೋನಿ ಫ್ಯಾನ್ಸ್….!

ಐಪಿಎಲ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕರಾಗಿರುವ ಮಹೇಂದ್ರ ಸಿಂಗ್​ ಧೋನಿ 39ನೇ ವಯಸ್ಸಿನಲ್ಲೂ ಉತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾವಲ್​ ತೆವಾಟಿಯಾ ಎಸೆತದಲ್ಲಿ ಧೋನಿ ಇನ್ನೇನು ರನೌಟ್​ ಆಗೇ ಬಿಟ್ಟರು ಅನ್ನೋವಷ್ಟರಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಡೈವ್​ ಹೊಡೆದು ತಮ್ಮ ವಿಕೆಟ್​ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ್ರು.

ಆದರೆ ಮಹೇಂದ್ರ ಸಿಂಗ್​ ಧೋನಿಯ ಈ ಪ್ರದರ್ಶನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳನ್ನ ಎದುರಿಸುವಂತಾಯ್ತು. 2019ರಲ್ಲಿ ಐಸಿಸಿ ಕ್ರಿಕೆಟ್​ ವಿಶ್ವ ಕಪ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯಾವಳಿಯಲ್ಲೂ ಇಂತದ್ದೇ ಡೈವ್ ಹೊಡೆಯದೇ ರನೌಟ್​ ಆಗಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡ್ತಿದ್ದಾರೆ.‌

ಆದರೆ ಸೋಶಿಯಲ್​ ಮೀಡಿಯಾದಲ್ಲಿ ಕ್ಯಾಪ್ಟನ್​ ಕೂಲ್​ ವಿರುದ್ಧ ಅಪಸ್ವರಗಳು ಕೇಳಿ ಬರ್ತಾ ಇದ್ದಂತೆಯೇ ಧೋನಿ ಅಭಿಮಾನಿಗಳು ದೇಶಕ್ಕಾಗಿ ಧೋನಿ ಯಾವ್ಯಾವ ತ್ಯಾಗ ಮಾಡಿದ್ದಾರೆ. ವಿಶ್ವಕಪ್​ನಂತೆಯೇ ಎಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ ಅನ್ನೋದನ್ನ ಟ್ವಿಟರ್​ನಲ್ಲಿ ಶೇರ್​ ಮಾಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುತ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...