alex Certify ಲೈಂಗಿಕ ಕಿರುಕುಳ ನೀಡಿದ ಕಬ್ಬಡಿ ಕೋಚ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಕಿರುಕುಳ ನೀಡಿದ ಕಬ್ಬಡಿ ಕೋಚ್ ಅರೆಸ್ಟ್

ನವದೆಹಲಿ: ಅಪ್ರಾಪ್ತ ವಯಸ್ಕರಿಗೆ ಲೈಂಗಿಕ ಕಿರುಕುಳ ನೀಡಿದ ಕಬ್ಬಡಿ ಕೋಚ್ ಬಂಧಿಸಲಾಗಿದೆ. ತನ್ನ ಅಕಾಡೆಮಿಯಲ್ಲಿ ಹಲವಾರು ಬಾರಿ ವಿದ್ಯಾರ್ಥಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ರೋಹಿಣಿ ಜಿಲ್ಲೆಯ ಕಂಝವಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 377, 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಲಿಯಾದವನು 15 ವರ್ಷದ ಬಾಲಕ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದ್ದಕ್ಕಿದ್ದಂತೆ, ಹುಡುಗ ಅಕಾಡೆಮಿಗೆ ಹೋಗಲು ನಿರಾಕರಿಸಿದ್ದು, ಅವನ ತಂದೆ ಕೇಳಿದಾಗ, ಅವನು ತನ್ನ ಕೋಚ್ ಕಿರುಕುಳ ನೀಡಿದ ಬಗ್ಗೆ ತಿಳಿಸಿದ್ದಾನೆ. ಆರೋಪಿ ವಿದ್ಯಾರ್ಥಿಗಳಿಗೆ ಕಬ್ಬಡಿ ಕಲಿಸುತ್ತಿದ್ದ. ಒಬ್ಬಂಟಿಯಾಗಿರುವಾಗ ಸಂತ್ರಸ್ತನಿಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...