alex Certify ದೆಹಲಿ ಕ್ಯಾಪಿಟಲ್ಸ್ ಗೆ ಬಿಗ್ ಶಾಕ್…..! ಎನ್ರಿಕ್ ನಾರ್ಖಿಯಾಗೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಕ್ಯಾಪಿಟಲ್ಸ್ ಗೆ ಬಿಗ್ ಶಾಕ್…..! ಎನ್ರಿಕ್ ನಾರ್ಖಿಯಾಗೆ ಕೊರೊನಾ

ದೆಹಲಿ ಕ್ಯಾಪಿಟಲ್ಸ್ ಗೆ ಮತ್ತೊಂದು ಆಘಾತವಾಗಿದೆ. ವೇಗದ ಬೌಲರ್ ಎನ್ರಿಕ್ ನಾರ್ಖಿಯಾ ಕೊರೊನಾ ಪಾಸಿಟಿವ್ ಆಗಿದ್ದಾರೆ.  ಐಪಿಎಲ್ 2021 ರಲ್ಲಿ ಕೊರೊನಾ ಪಾಸಿಟಿವ್ ಆಗಿರುವ 5 ನೇ ಆಟಗಾರ ನಾರ್ಖಿಯಾ. ದೆಹಲಿ ಕ್ಯಾಪಿಟಲ್ಸ್ ನ ಅಕ್ಷರ್ ಪಟೇಲ್, ಡೇನಿಯಲ್ ಸೇಮ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ದೇವದುತ್ ಪಡಿಕ್ಕಲ್ ಮತ್ತು ಕೋಲ್ಕತಾ ನೈಟ್ ರೈಡರ್ಸ್‌ನ ನಿತೀಶ್ ರಾಣಾಗೆ ಕೊರೊನಾ ಕಾಣಿಸಿಕೊಂಡಿತ್ತು.

ಪಾಕಿಸ್ತಾನ ವಿರುದ್ಧ ಏಕದಿನ ಸರಣಿ ಆಡಿದ ನಾರ್ಖಿಯಾ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದಾರೆ. ಏಪ್ರಿಲ್ 6 ರಂದು ದೆಹಲಿ ಕ್ಯಾಪಿಟಲ್ಸ್ನ ವೇಗದ ಬೌಲರ್ ಕಗಿಸೊ ರಬಾಡಾ ಕೂಡ ಭಾರತಕ್ಕೆ ಆಗಮಿಸಿದ್ದರು. ರಬಾಡಾದ ವರದಿ ನಕಾರಾತ್ಮಕವಾಗಿದೆ. ಆದ್ರೆ ಇಬ್ಬರೂ ಆಟಗಾರರನ್ನು ಕ್ವಾರಂಟೈನ್ ಮಾಡಲಾಗಿದೆ.

ದೆಹಲಿ ಕ್ಯಾಪಿಟಲ್ಸ್ ತಮ್ಮ ಎರಡನೇ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಮೊದಲ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ದೆಹಲಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಏಳು ವಿಕೆಟ್ ಗಳಿಂದ ಸೋಲಿಸಿದೆ. ರಬಡಾ ಮತ್ತು ನಾರ್ಖಿಯಾ ತಂಡಕ್ಕೆ ಅಲಭ್ಯವಾದ್ರೆ ದೆಹಲಿ ತಂಡಕ್ಕೆ ನಷ್ಟವಾಗಲಿದೆ. ಈ ಎರಡೂ ಬೌಲರ್‌ಗಳು ಕಳೆದ ಐಪಿಎಲ್‌ನಲ್ಲಿ 52 ವಿಕೆಟ್ ಪಡೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...