alex Certify ಟಿ20ಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಸುಬೋಧ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20ಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಸುಬೋಧ್

ನವದೆಹಲಿ: ಟಿ20 ಕ್ರಿಕೆಟ್ ನಲ್ಲಿ ದ್ವಿಶತಕವೊಂದು ದಾಖಲಾಗಿದೆ. ದೆಹಲಿಯ ಸುಭೋದ್ ಭಟ್ಟಿ ಎಂಬುವರು ಟಿ20 ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ 79 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 205 ರನ್ ಗಳಿಸಿದ್ದಾರೆ. ಕೇವಲ 17 ಎಸೆತಗಳಲ್ಲಿ ಮೊದಲ 102 ರನ್ ಗಳಿಸಿದ ಸುಭೋದ್ ದೆಹಲಿ ಇಲೆವನ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ದೆಹಲಿ ಇಲೆವೆನ್ ಪರವಾಗಿ 8 ಪ್ರಥಮ ದರ್ಜೆ ಹಾಗೂ 24 ಲಿಸ್ಟ್ ಎ, 39 ಟಿ20 ಪಂದ್ಯಗಳನ್ನು ಆಡಿರುವ ಸುಬೋಧ್ ಐಪಿಎಲ್ ಬಾಗಿಲು ಬಡಿಯತೊಡಗಿದ್ದಾರೆ. 2007 ರಲ್ಲಿ ಶ್ರೀಲಂಕಾದ ಧನುಕಾ ಪತಿರಾಣಾ ಇಂಗ್ಲೆಂಡ್ ನಲ್ಲಿ ಲೀಗ್ ವೊಂದರ ಟಿ20 ಯಲ್ಲಿ ದ್ವಿಶತಕ ಸಿಡಿಸಿದ್ದಾರೆ. ಐಪಿಎಲ್ ನಲ್ಲಿ ಕ್ರಿಸ್ ಗೇಲ್ ಅಜೇಯ 175 ರನ್ ಗಳಿಸಿರುವುದು ದಾಖಲೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...