alex Certify ನಿವೃತ್ತಿ ಘೋಷಣೆ ನಂತ್ರ ಬಿಕ್ಕಿ ಬಿಕ್ಕಿ ಅತ್ತ ಧೋನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತಿ ಘೋಷಣೆ ನಂತ್ರ ಬಿಕ್ಕಿ ಬಿಕ್ಕಿ ಅತ್ತ ಧೋನಿ…!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಗಸ್ಟ್ 15ರಂದು ರಾತ್ರಿ 7 ಗಂಟೆ 29 ನಿಮಿಷಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ರು. ಆಗಸ್ಟ್ 15ರಂದು ನಿವೃತ್ತಿ ಘೋಷಣೆ ಮಾಡುವ ಹಿಂದೆ ಕಾರಣವೊಂದಿದೆ. ಈ ಬಾರಿ ಭಾರತ 73ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಧೋನಿ ನಿವೃತ್ತಿ ಘೋಷಣೆ ಮಾಡಿದ ಕೆಲ ಸಮಯದಲ್ಲೇ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದ್ರು. ಧೋನಿ ಜರ್ಸಿ ನಂಬರ್ 7 ಆದ್ರೆ ಸುರೇಶ್ ರೈನಾ ಜರ್ಸಿ ನಂಬರ್ 3. ಒಟ್ಟುಗೂಡಿಸಿದ್ರೆ 73 ಆಗುತ್ತದೆ.

ನಿವೃತ್ತಿ ಘೋಷಣೆ ದಿನ ಇಬ್ಬರಿಗೂ ವಿಶೇಷವಾಗಿತ್ತು. ನಿವೃತ್ತಿ ಘೋಷಣೆ ನಂತ್ರ ಇಬ್ಬರು ತಬ್ಬಿಕೊಂಡ್ರು. ನಂತ್ರ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎನ್ನಲಾಗಿದೆ. ಹಾಗೆ ಆ ರಾತ್ರಿ ಪಾರ್ಟಿ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ.

ಧೋನಿ ಪತ್ನಿ ಸಾಕ್ಷಿ ಕೂಡ ಇನ್ಸ್ಟ್ರಾಗ್ರಾಮ್ ನಲ್ಲಿ ಇದೇ ವಿಷ್ಯ ಹೇಳಿದ್ದರು. ನಿವೃತ್ತಿ ಘೋಷಣೆ ವೇಳೆ ಧೋನಿ ತಮ್ಮ ಕಣ್ಣೀರನ್ನು ಹಿಡಿದಿಟ್ಟಿದ್ದರು ಎನ್ನಿಸುತ್ತದೆ ಎಂದು ಸಾಕ್ಷಿ ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...