alex Certify ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ

ಚೆನ್ನೈ ಟೆಸ್ಟ್  ಸೋಲಿನ ನಂತ್ರ ವಿರಾಟ್ ಕೊಹ್ಲಿಗೆ ಮತ್ತೊಂದು ಆಘಾತವಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

ಚೆನ್ನೈ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ ಬಾರಿಸಿದ ಜೋ ರೂಟ್ ಎರಡು ಸ್ಥಾನಗಳ ಏರಿಕೆ ಕಂಡು 3 ನೇ ಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ. ಜೋ ರೂಟ್ 883 ರೇಟಿಂಗ್ ಪಾಯಿಂಟ್‌ ಪಡೆದಿದ್ದಾರೆ. ಇದು 2017 ರ ನಂತ್ರ ಅವ್ರ ಅತ್ಯುತ್ತಮ ಪ್ರದರ್ಶನವಾಗಿದೆ.

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್‌ ನ್ಯೂಸ್: IRCTC ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ 2 ಸಾವಿರದವರೆಗೆ ಕ್ಯಾಶ್‌ ಬ್ಯಾಕ್ ..!

ಭಾರತದ ಉಪಖಂಡದಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಜೋ ರೂಟ್ 684 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಜೋ ರೂಟ್ ಒಂದು ಶತಕ ಮತ್ತು ದ್ವಿಶತಕ ಬಾರಿಸಿದ್ದರು. 2017 ರ ನಂತರ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಜೋ ರೂಟ್ ಹಿಂದಿಕ್ಕಿದ್ದಾರೆ. ಜೋ ರೂಟ್, ನಂಬರ್ ಒನ್ ಸ್ಥಾನದಲ್ಲಿರುವ ಕೆನ್ ವಿಲಿಯಮ್ಸ್ ಗಿಂತ 36 ಪಾಯಿಂಟ್ ಹಿಂದಿದ್ದಾರೆ. ಸ್ಟೀವ್ ಸ್ಮಿತ್ ವಿಲಿಯಮ್ಸ್ ಗಿಂತ 8 ಪಾಯಿಂಟ್ ಹಿಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 91 ರನ್ ಗಳಿಸಿದ ರಿಷಭ್ ಪಂತ್ 13 ನೇ ಸ್ಥಾನದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...