ಚೆನ್ನೈ ಟೆಸ್ಟ್ ಸೋಲಿನ ನಂತ್ರ ವಿರಾಟ್ ಕೊಹ್ಲಿಗೆ ಮತ್ತೊಂದು ಆಘಾತವಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.
ಚೆನ್ನೈ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ ಬಾರಿಸಿದ ಜೋ ರೂಟ್ ಎರಡು ಸ್ಥಾನಗಳ ಏರಿಕೆ ಕಂಡು 3 ನೇ ಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ. ಜೋ ರೂಟ್ 883 ರೇಟಿಂಗ್ ಪಾಯಿಂಟ್ ಪಡೆದಿದ್ದಾರೆ. ಇದು 2017 ರ ನಂತ್ರ ಅವ್ರ ಅತ್ಯುತ್ತಮ ಪ್ರದರ್ಶನವಾಗಿದೆ.
ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್: IRCTC ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ 2 ಸಾವಿರದವರೆಗೆ ಕ್ಯಾಶ್ ಬ್ಯಾಕ್ ..!
ಭಾರತದ ಉಪಖಂಡದಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಜೋ ರೂಟ್ 684 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಜೋ ರೂಟ್ ಒಂದು ಶತಕ ಮತ್ತು ದ್ವಿಶತಕ ಬಾರಿಸಿದ್ದರು. 2017 ರ ನಂತರ ಮೊದಲ ಬಾರಿಗೆ ವಿರಾಟ್ ಕೊಹ್ಲಿಯನ್ನು ಜೋ ರೂಟ್ ಹಿಂದಿಕ್ಕಿದ್ದಾರೆ. ಜೋ ರೂಟ್, ನಂಬರ್ ಒನ್ ಸ್ಥಾನದಲ್ಲಿರುವ ಕೆನ್ ವಿಲಿಯಮ್ಸ್ ಗಿಂತ 36 ಪಾಯಿಂಟ್ ಹಿಂದಿದ್ದಾರೆ. ಸ್ಟೀವ್ ಸ್ಮಿತ್ ವಿಲಿಯಮ್ಸ್ ಗಿಂತ 8 ಪಾಯಿಂಟ್ ಹಿಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 91 ರನ್ ಗಳಿಸಿದ ರಿಷಭ್ ಪಂತ್ 13 ನೇ ಸ್ಥಾನದಲ್ಲಿದ್ದಾರೆ.