alex Certify ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿಲ್ಲವೆಂದ್ರೆ ಯುಎಇನಲ್ಲಿ ನಡೆಯಲಿದೆ ಟಿ-20 ವಿಶ್ವಕಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿಲ್ಲವೆಂದ್ರೆ ಯುಎಇನಲ್ಲಿ ನಡೆಯಲಿದೆ ಟಿ-20 ವಿಶ್ವಕಪ್

ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗದೆ ಹೋದಲ್ಲಿ ಈ ವರ್ಷ ನಡೆಯುವ ಐಸಿಸಿ ಟಿ-20 ವಿಶ್ವಕಪ್ ಭಾರತದ ಬದಲು ಯುಎಇಯಲ್ಲಿ ನಡೆಯಲಿದೆ. ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ. ಈ ವರ್ಷ ಟಿ-20 ವಿಶ್ವಕಪ್ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ. ಈ ಬಾರಿ ವಿಶ್ವಕಪ್ ಭಾರತದಲ್ಲಿ ನಡೆಯಬೇಕಿತ್ತು. ಆದ್ರೆ ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಬಿಸಿಸಿಐ ಜನರಲ್ ಮ್ಯಾನೇಜರ್ ಧೀರಜ್ ಮಲ್ಹೋತ್ರಾ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಈ ವಿಷ್ಯವನ್ನು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ದೇಶದಲ್ಲಿ ವಿಶ್ವಕಪ್ ಆಯೋಜಿಸುವ ಭರವಸೆಯನ್ನು ಬಿಟ್ಟಿಲ್ಲ. ವಿಶ್ವಕಪ್ ನ್ನು ದೇಶದಲ್ಲಿಯೇ ಆಯೋಜಿಸುವ ಪ್ರಯತ್ನ ನಡೆಯಲಿದೆ. ಆದ್ರೆ ಪರಿಸ್ಥಿತಿ ಬಗ್ಗೆ ಗಮನ ನೀಡಬೇಕಾಗುತ್ತದೆ. ಈ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡುತ್ತೇವೆಂದು ಅವರು ಹೇಳಿದ್ದಾರೆ.

ಬ್ಯಾಕ್ ಅಪ್ ಸ್ಥಳವಾಗಿ ಯುಎಇಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ. ಅಂತಿಮ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಕೊರೊನಾ ಹಿನ್ನಲೆಯಲ್ಲಿ ಬಿಸಿಸಿಐ, ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್  ಆಯೋಜಿಸಿತ್ತು. ದೇಶದಲ್ಲಿ ಕೊರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಆದ್ರೆ ಎರಡನೇ ಅಲೆ ಮಧ್ಯೆಯೂ ದೇಶದಲ್ಲಿ ಐಪಿಎಲ್ ಆಯೋಜನೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...