alex Certify ಸಮುದ್ರದ ಮಧ್ಯೆ ವಿರುಷ್ಕಾ ಜೋಡಿಯ ಸುಂದರ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದ ಮಧ್ಯೆ ವಿರುಷ್ಕಾ ಜೋಡಿಯ ಸುಂದರ ಫೋಟೋ

Virat Kohli and Anushka Sharma gaze lovingly at each other as they take a  dip in the sea. See pic - PressboltNews

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ನಲ್ಲಿ ಆರ್ ಸಿ ಬಿ ಉತ್ತಮ ಪ್ರದರ್ಶನ ತೋರುತ್ತಿದೆ. ಐಪಿಎಲ್ ಪಂದ್ಯದ ಮಧ್ಯೆಯೇ ನಾಯಕ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಜೊತೆ ಕೊಹ್ಲಿ ಉತ್ತಮ ಸಮಯ ಕಳೆಯುತ್ತಿದ್ದಾರೆ. ಇಬ್ಬರು ಅಟ್ಲಾಂಟಿಸ್ ಪಾಮ್ ಹೋಟೆಲ್ ಮುಂದಿರುವ ಸಮುದ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಫೋಟೋ ಹಂಚಿಕೊಂಡಿದ್ದಾರೆ. ಫೋಟೋ ಸುಂದರವಾಗಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ. ಸೂರ್ಯಾಸ್ತದ ವೇಳೆ ಇಬ್ಬರು ಸಮುದ್ರದಲ್ಲಿ ಅರ್ಧ ಮುಳುಗಿದ್ದಾರೆ. ಇಬ್ಬರೂ ಪರಸ್ಪರ ನೋಡ್ತಿದ್ದಾರೆ. ಮುಂದೆ ಕಟ್ಟಡವೊಂದಿದೆ.

ಸುಂದರವಾಗಿ ಬಂದಿರುವ ಈ ಫೋಟೋವನ್ನು ಎಬಿ ಡಿವಿಲಿಯರ್ಸ್ ಕ್ಲಿಕ್ ಮಾಡಿದ್ದಾರೆ. ಫೋಟೋ ಹಂಚಿಕೊಂಡ ಕೊಹ್ಲಿ ಹಾಗೂ ಅನುಷ್ಕಾ ಈ ವಿಷ್ಯವನ್ನು ಹೇಳಿದ್ದಾರೆ. ಇದಕ್ಕೆ ಎಬಿಡಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅನುಷ್ಕಾ, ಕೊಹ್ಲಿ ಅಭಿಮಾನಿಗಳು ಫೋಟೋ ಮೆಚ್ಚಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಗರ್ಭಿಣಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷ್ಯ, 2021ರಲ್ಲಿ ಕೊಹ್ಲಿ ತಂದೆಯಾಗಲಿದ್ದಾರೆ. ಕೆಲ ದಿನಗಳ ಹಿಂದೆ ಈ ಸುದ್ದಿಯನ್ನು ಇಬ್ಬರೂ ಹಂಚಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...