alex Certify ಆಸ್ಟ್ರೇಲಿಯಾ ಕ್ರಿಕೆಟಿಗರ ಹೊಸ ಜೆರ್ಸಿಯ ಹಿಂದಿದೆ ನಾನಾ ಅರ್ಥ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾ ಕ್ರಿಕೆಟಿಗರ ಹೊಸ ಜೆರ್ಸಿಯ ಹಿಂದಿದೆ ನಾನಾ ಅರ್ಥ…!

ಭಾರತದ ವಿರುದ್ಧ ಟಿ 20 ಸರಣಿಗೆ ಆಸ್ಟ್ರೇಲಿಯಾ ತನ್ನ ಜರ್ಸಿಯನ್ನ ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾದ ಕ್ರಿಕೆಟ್​ ಬೋರ್ಡ್​ ಹೊಸ ಜರ್ಸಿ ಧರಿಸಿರುವ ಮಿಶೆಲ್​ ಸ್ಟಾರ್ಕ್​ರ ಫೋಟೋವನ್ನ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಎಎಸ್ಐಸಿಎಸ್ ತಯಾರಕ ಸಂಸ್ಥೆ ಮತ್ತು ಆಂಟಿ ಫಿಯೋನಾ ಕ್ಲಾರ್ಕ್ ಮತ್ತು ಕರ್ಟ್ನಿ ಹ್ಯಾಗನ್ ಎಂಬ ಇಬ್ಬರು ಸ್ಥಳೀಯ ಮಹಿಳೆಯರ ಸಹಯೋಗದಲ್ಲಿ ಹೊಸ ಜೆರ್ಸಿ ವಿನ್ಯಾಸಗೊಂಡಿದ್ದು, ಬುಧವಾರ  ಹೊಸ ಜೆರ್ಸಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಅನಾವರಣಗೊಳಿಸಿದೆ.

ಇನ್ನು ಈ ಜರ್ಸಿಯಲ್ಲಿರುವ ಪ್ರತಿಯೊಂದು ಚಿತ್ರಕ್ಕೂ ಅದರದೇ ಆದ ಅರ್ಥವಿದೆಯಂತೆ. ಕುಟುಂಬಗಳ ನಡುವಿನ ಸಂಪರ್ಕವನ್ನ ತೋರಿಸೋಕೆ ನದಿ ಹಾಗೂ ಭೂಮಿಯ ಚಿತ್ರವನ್ನ ಚಿತ್ರಿಸಲಾಗಿದೆ. ನಕ್ಷತ್ರಗಳು ಈ ಹಿಂದೆ ಕ್ರಿಕೆಟ್​ ಲೋಕವನ್ನ ಆಳಿ ಹೋದ ದಂತಕತೆಗಳನ್ನ ಪ್ರತಿನಿಧಿಸುತ್ತಿದೆ. ಮಧ್ಯದಲ್ಲಿ ಕಿತ್ತಳೆ ಬಣ್ಣದ ವಿಶಿಷ್ಟ ಡಿಸೈನ್​ ಹೊಂದಿದೆ.

ಇನ್ನು ಜರ್ಸಿಯ ಹಿಂಭಾಗದಲ್ಲಿ 1868ರ ಕ್ರಿಕೆಟ್​ ತಂಡದ 11 ಆಟಗಾರರನ್ನ ಪ್ರತಿನಿಧಿಸುವ ವಿನ್ಯಾಸವಿದೆ. ಜರ್ಸಿಯ ಈ ವಿಶಿಷ್ಟ ವಿನ್ಯಾಸ ಸಾಕಷ್ಟು ಪ್ರಶಂಸೆಯನ್ನ ಗಳಿಸಿದೆ.

— Mufaddal Vohra (@mufaddal_vohra) November 11, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...