alex Certify ʼಐಪಿಎಲ್​​ʼನಲ್ಲಿ ಆಡುತ್ತಿರುವ ಆಸಿಸ್​ ಕ್ರಿಕೆಟಿಗರ ಹೊಣೆ ನಮ್ಮದಲ್ಲವೆಂದ ಆಸ್ಟ್ರೇಲಿಯಾ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಐಪಿಎಲ್​​ʼನಲ್ಲಿ ಆಡುತ್ತಿರುವ ಆಸಿಸ್​ ಕ್ರಿಕೆಟಿಗರ ಹೊಣೆ ನಮ್ಮದಲ್ಲವೆಂದ ಆಸ್ಟ್ರೇಲಿಯಾ ಪ್ರಧಾನಿ

ದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನ ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಭಾರತದಿಂದ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಈ ನಡುವೆ ಐಪಿಎಲ್​ ನಿಮಿತ್ತ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗರು ತಾಯ್ನಾಡಿಗೆ ವಾಪಸ್ಸಾಗಲು ತಮ್ಮ ಸ್ವಂತ ವ್ಯವಸ್ಥೆಯನ್ನ ಮಾಡಿಕೊಳ್ಳಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ ಹೇಳಿದ್ರು.

ಆಸ್ಟ್ರೇಲಿಯಾ ಇಂದು ಭಾರತದಿಂದ ಎಲ್ಲಾ ಪ್ರಯಾಣಿಕ ವಿಮಾನಗಳ ಆಸ್ಟ್ರೇಲಿಯಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಮೇ 15ರವರೆಗೂ ಈ ತಾತ್ಕಾಲಿಕ ನಿರ್ಬಂಧ ಮುಂದುವರಿಯಲಿದೆ ಎಂದು ಪ್ರಕಟಣೆ ಹೊರಡಿಸಿದೆ.

ಈ ಬಳಿಕ ಆಸಿಸ್​ ಕ್ರಿಕೆಟಿಗರ ವಿಚಾರವಾಗಿ ಮಾತನಾಡಿದ ಸ್ಕಾಟ್​ ಮಾರಿಸನ್​, ಆಸಿಸ್​ ಆಟಗಾರರು ತಮ್ಮ ವೈಯಕ್ತಿಕ ಕಾರಣದಿಂದಾಗಿ ಈ ಪ್ರವಾಸವನ್ನ ಕೈಗೊಂಡಿದ್ದಾರೆ. ಇದು ಆಸ್ಟ್ರೇಲಿಯಾ ಕ್ರಿಕೆಟ್​ ಪ್ರವಾಸ ಅಲ್ಲ. ಅವರು ತಮ್ಮ ಸ್ವಂತ ಖರ್ಚಿನಲ್ಲಿ ಭಾರತಕ್ಕೆ ತೆರಳಿದ್ದಾರೆ ಹಾಗೂ ಸ್ವಂತ ಖರ್ಚಿನಲ್ಲೇ ವಾಪಸ್ಸಾಗಬೇಕು ಎಂದು ಹೇಳಿದ್ರು.

ಮೂವರು ಆಸ್ಟ್ರೇಲಿಯಾ ಆಟಗಾರರಾದ ಆಂಡ್ರ್ಯೂ ಟೈ, ಕೇನ್​ ರಿಚರ್ಡ್​ಸನ್​ ಹಾಗೂ ಆಡಮ್​ ಝಂಪಾ ಆರೋಗ್ಯ ಕಾರಣದಿಂದಾಗಿ ಲೀಗ್​ನಿಂದ ಹೊರನಡೆದಿದ್ದಾರೆ. ಆದರೆ ಇವರನ್ನ ಹೊರತುಪಡಿಸಿ ಇನ್ನೂ 14 ಮಂದಿ ಆಸ್ಟ್ರೇಲಿಯಾ ಆಟಗಾರರು ಐಪಿಎಲ್​ನಲ್ಲಿ ಆಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...