alex Certify ಕೊರೊನಾ ಸೋಂಕಿಗೊಳಗಾಗಿದ್ದ ಫುಟ್​ಬಾಲ್​​ ಆಟಗಾರರು ವಿಮಾನ ದುರಂತದಲ್ಲಿ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿಗೊಳಗಾಗಿದ್ದ ಫುಟ್​ಬಾಲ್​​ ಆಟಗಾರರು ವಿಮಾನ ದುರಂತದಲ್ಲಿ ಬಲಿ

ಕೊರೊನಾ ವೈರಸ್​ ಸೋಂಕಿಗೆ ಒಳಗಾದ ಬಳಿಕ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದ ಬ್ರೆಜಿಲ್​ ಕ್ಲಬ್​ ಪಾಲ್ಮಾಸ್​ ಫುಟ್​​ಬಾಲ್​ ಆಟಗಾರರಿದ್ದ ವಿಮಾನ ಅಪಘಾತಕ್ಕೀಡಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಉತ್ತರ ರಾಜ್ಯದ ಟೊಕಾಂಟಿನ್ಸ್​ನಲ್ಲಿ ವಿಮಾನ ಟೇಕಾಫ್​ ಆಗುತ್ತಿದ್ದ ವೇಳೆ ಇದಕ್ಕಿದ್ದಂತೆ ರನ್​​ವೇ ಕಡೆ ನುಗ್ಗಿದ ವಿಮಾನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಕ್ಲಬ್​ನ ಅಧ್ಯಕ್ಷ ಹಾಗೂ ಪೈಲಟ್​ ಕೂಡ ಮೃತರಾಗಿದ್ದಾರೆ ಎಂದು ತಂಡ ವರದಿ ಮಾಡಿದೆ. ವಿಲಾನೋವಾ ವಿರುದ್ಧದ ಪಂದ್ಯಕ್ಕೆ ಆಟಗಾರರು ಗೋಯಾನಿಯಾಗೆ ತೆರಳುತ್ತಿದ್ದರು ಎನ್ನಲಾಗಿದೆ.

ಕೊರೊನಾ ಸೋಂಕಿಗೆ ಒಳಗಾಗಿದ್ದ ಕಾರಣ ಈ ಆಟಗಾರರು ಖಾಸಗಿ ವಿಮಾನದಲ್ಲಿ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದರು ಎಂದು ಕ್ಲಬ್​ ವಕ್ತಾರ ಇಜಾಬೆಲಾ ಮಾರ್ಟಿನ್ಸ್ ಹೇಳಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನ ಕ್ಲಬ್​ ಅಧ್ಯಕ್ಷ ಲ್ಯೂಕಾಸ್​ ಮೀರಾ ಹಾಗೂ ಆಟಗಾರರಾದ ಲ್ಯೂಕಾಸ್​ ಪ್ರಾಕ್ಸೆಡೆಸ್​, ಗಿಲ್ಹೆರ್ಮ್ ನೊ, ರಾನುಲೆ ಮತ್ತು ಮಾರ್ಕಸ್ ಮೊಲಿನಾರಿ ಎಂದು ಗುರುತಿಸಲಾಗಿದೆ. ಪೈಲಟ್​ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ವಿಮಾನ ದುರಂತಕ್ಕೆ ಖಚಿತ ಕಾರಣ ತಿಳಿದು ಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...