alex Certify ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ RCBಗೆ ರೋಚಕ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ RCBಗೆ ರೋಚಕ ಜಯ

ನಿನ್ನೆ ನಡೆದ ಐಪಿಎಲ್ ನ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ನಾಯಕ ವಿರಾಟ್ ಕೋಹ್ಲಿ 12ರನ್ ಗಳಿಸಿ ಔಟಾದರೇ ದೇವದತ್ ಪಡಿಕ್ಕಲ್ 17ರನ್ ಗಳಿಸಿದ್ದು, ಇಶಾಂತ್ ಶರ್ಮಗೆ ತಮ್ಮ ವಿಕೆಟ್ ಒಪ್ಪಿಸಿದರು. ಎಬಿ ಡಿವಿಲಿಯರ್ಸ್ 42 ಎಸೆತಗಳಲ್ಲಿ (75)ರನ್ ಗಳಿಸುವ ಮೂಲಕ ಆರ್ ಸಿ ಬಿ ತಂಡಕ್ಕೆ ನೆರವಾದರು. ಒಟ್ಟಾರೆ ಆರ್ ಸಿ ಬಿ ತಂಡ 5 ವಿಕೆಟ್ ನಷ್ಟಕ್ಕೆ 171ರನ್ ಗಳ ಮೊತ್ತ ದಾಖಲಿಸಿತು.

ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲಿ ಶಿಖರ್ ಧವನ್ 6 ರನ್ ಗಳಿಸಿ, ಕೈಲ್ ಜೇಮಿಸನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಟೀವ್ ಸ್ಮಿತ್ 4ರನ್ ಗಳಿಸಿ ಔಟಾದರೇ ಪೃಥ್ವಿ ಶಾ 21ರನ್ ಗಳಿಸಿದ್ದು, ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ ಔಟಾದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 48 (58) ರನ್ ಹಾಗೂ ಶಿಮ್ರಾನ್ ಹೆಟ್ಮೈರ್ 25 ಎಸೆತಗಳಲ್ಲಿ 53ರನ್ ಗಳಿಸಿದ್ದು, ಈ ಇಬ್ಬರು ಗೆಲುವಿಗಾಗಿ ಹೋರಾಡಿದರು. ಕೊನೆಯ ಓವರ್ ನಲ್ಲಿ ರೋಮಾಂಚಕಾರಿಯಾಗಿದ್ದ ಈ ಪಂದ್ಯದಲ್ಲಿ ಆರ್ ಸಿ ಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 1 ರನ್ ಗಳಿಂದ ರೋಚಕ ಜಯ ಸಾಧಿಸಿತು. ಈ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಆರ್ ಸಿ ಬಿ ತಂಡ ಅಗ್ರಸ್ಥಾನಕ್ಕೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...