alex Certify ಟಿ20 ಯಲ್ಲೂ ದ್ವಿಶತಕ ಬಾರಿಸುತ್ತಾರೆ ಈ ಆಟಗಾರ ಎಂದು ಹೇಳಿದ ಮೊಹಮ್ಮದ್ ಕೈಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ಯಲ್ಲೂ ದ್ವಿಶತಕ ಬಾರಿಸುತ್ತಾರೆ ಈ ಆಟಗಾರ ಎಂದು ಹೇಳಿದ ಮೊಹಮ್ಮದ್ ಕೈಫ್

ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 3 ಬಾರಿ ದ್ವಿಶತಕ ಗಳಿಸಿದ್ದಾರೆ. ಮೊದಲ ಬಾರಿ ದ್ವಿಶತಕ ಗಳಿಸಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ನಂತರ ಸಾಕಷ್ಟು ಆಟಗಾರರು ಡಬ್ಬಲ್ ಸೆಂಚುರಿ ಬಾರಿಸಿದ್ದಾರೆ ರೋಹಿತ್ ಶರ್ಮಾ ಅವರ ದ್ವಿ ಶತಕಗಳಲ್ಲಿ 264 ರನ್ ಏಕದಿನ ಕ್ರಿಕೆಟ್ ನಲ್ಲಿ ದೊಡ್ಡ ಮೊತ್ತವಾಗಿದೆ. ಈ ದಾಖಲೆಯನ್ನು ಇನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.

ಈ ಕುರಿತು ಭಾರತದ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಕೈಫ್ ಈ ರೀತಿ ಹೇಳಿದ್ದಾರೆ. ನಾವು ಕ್ರಿಕೆಟ್ ನಲ್ಲಿದ್ದ ಸಮಯದಲ್ಲಿ ಒಂದು ಟೀಮ್ 250 ರನ್ ಗಳಿಸಿದರೆ ಸಾಕು ಇದೇ ದೊಡ್ಡ ಮೊತ್ತವಾಗುತ್ತಿತ್ತು. ಆದರೀಗ 400 ರ ಗಡಿ ದಾಟುತ್ತಿದ್ದಾರೆ. ಟಿ20 ಯಲ್ಲಿ ದ್ವಿಶತಕ ಬಾರಿಸುವ ಸಾಮರ್ಥ್ಯ ರೋಹಿತ್ ಶರ್ಮಾ ಅವರಿಗಿದೆ ಎಂದು ಹಿಟ್ ಮ್ಯಾನ್ ಬಗ್ಗೆ ಮಹಮ್ಮದ್ ಕೈಫ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...