alex Certify ಜನರ ಆತ್ಮವಿಶ್ವಾಸ ಹೆಚ್ಚಿಸಲು ಕ್ರಿಕೆಟಿಗನ ಹೀಗೊಂದು ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರ ಆತ್ಮವಿಶ್ವಾಸ ಹೆಚ್ಚಿಸಲು ಕ್ರಿಕೆಟಿಗನ ಹೀಗೊಂದು ಸಲಹೆ

ಕೊರೊನಾ ಮಹಾಮಾರಿಯಿಂದಾಗಿ ಈಗಾಗಲೇ ದೇಶ ತತ್ತರಿಸಿ ಹೋಗುತ್ತಿದೆ‌. ಲಾಕ್ ಡೌನ್ ನಿಂದಾಗಿ ಉದ್ಯಮಗಳು ನಿಂತು ಹೋಗಿವೆ. ಸಿನಿಮಾ ಚಿತ್ರೀಕರಣ, ಒಲಿಂಪಿಕ್, ಕ್ರಿಕೆಟ್ ಹೀಗೆ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಲಾಕ್ ಡೌನ್ ಮುಂದುವರೆಸಿದರೂ ಕೊರೊನಾ ಹರಡುವಿಕೆ ಕಡಿಮೆಯಾಗಿಲ್ಲ. ಹೀಗಾಗಿ ಜನ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇವರ ಚೇತರಿಕೆಗೆ ಇದೀಗ ಪೀಟರ್ಸನ್ ಒಂದು ಟಿಪ್ಸ್ ಕೊಟ್ಟಿದ್ದಾರೆ.

ಹೌದು, ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಕೆವಿನ್‌ ಪೀಟರ್ಸನ್‌ ಹೀಗೊಂದು ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ಮಹಾಮಾರಿ ಸೋಂಕು ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಈ ಮಹಾ ಮಾರಿ ಕ್ರೀಡಾಜಗತ್ತನ್ನು ಕೂಡ ಸಂಪೂರ್ಣ ಸ್ತಬ್ಧವಾಗುವಂತೆ ಮಾಡಿದೆ. ಬಿಟ್ಟಿದೆ. ಈ ಮಹಾಮಾರಿ ಯಾವಾಗ ಹೋಗುತ್ತದೆಯೋ ಗೊತ್ತಿಲ್ಲ. ಈ ಕೊರೊನಾ ತೊಲಗುವವರೆಗೂ ಕ್ರಿಕೆಟ್‌ ಚಟುವಟಿಕೆಗಳು ಶುರುವಾಗುವುದು ಬಹುತೇಕ ಸಾಧ್ಯವಿಲ್ಲ.

ಇಂತಹ ಸಮಯದಲ್ಲಿ ಜನರ ಮತ್ತು ಅಭಿಮಾನಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಾಗಿದೆ. ಹಾಗಾಗಿ ಆದಷ್ಟು ಬೇಗ ಅಂತರಾಷ್ಟ್ರೀಯ ಕ್ರಿಕೆಟ್ ಆರಂಭಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಮುಚ್ಚಿದ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಡಿಸಬೇಕು. ಮೈದಾನದಲ್ಲಿ ಅಭಿಮಾನಿಗಳು, ಪ್ರೇಕ್ಷಕರು ಇರಲಿ ಇಲ್ಲದೇ ಇರಲಿ ಕ್ರಿಕೆಟ್ ಆಟವಾಡಬೇಕು. ಹೀಗಾದಲ್ಲಿ ಜನರಿಗೆ ಒಂದು ಧನಾತ್ಮಕ ಮನಃಸ್ಥಿತಿ ಬರುತ್ತದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...