alex Certify ಕೆ.ಎಲ್. ರಾಹುಲ್‌ ರನ್ನು ಈ ಇಬ್ಬರಲ್ಲಿ ಯಾರು ಹಿಂದಿಕ್ಕಲಿದ್ದಾರೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ.ಎಲ್. ರಾಹುಲ್‌ ರನ್ನು ಈ ಇಬ್ಬರಲ್ಲಿ ಯಾರು ಹಿಂದಿಕ್ಕಲಿದ್ದಾರೆ…?

ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ 14 ಪಂದ್ಯಗಳನ್ನಾಡಿದ್ದು 670 ರನ್ ಗಳಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈಗಾಗಲೇ ಹೊರಹೋಗಿದ್ದು ಇವರನ್ನು ಹಿಂದಿಕ್ಕಲು ಇಬ್ಬರು ಬ್ಯಾಟ್ಸ್ ಮನ್ ಗಳಿಗೆ ಅವಕಾಶವಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ 15 ಪಂದ್ಯಗಳನ್ನಾಡಿದ್ದು 546 ರನ್ ಗಳಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ 15 ಪಂದ್ಯದಲ್ಲಿ 525 ರನ್ ಗಳಿಸಿದ್ದು ಮೂರನೇ ಸ್ಥಾನದಲ್ಲಿದ್ದಾರೆ.

ಇಂದು ಸನ್ ರೈಸರ್ಸ್ ಹೈದರಾಬಾದ್‌ ಹಾಗೂ ಡೆಲ್ಲಿ ಮುಖಾಮುಖಿಯಾಗಲಿದ್ದು ಡೇವಿಡ್ ವಾರ್ನರ್ ಹಾಗೂ ಶಿಖರ್ ಧವನ್ ಇವರಿಬ್ಬರು ಬೇರೆ ಬೇರೆ ತಂಡದವರಾಗಿರುವುದರಿಂದ ಯಾವ ತಂಡ ಗೆಲ್ಲುವುದೋ ಆ ತಂಡದ  ಆಟಗಾರನಿಗೆ ಫೈನಲ್ ನಲ್ಲಿ ಮತ್ತೊಂದು ಅವಕಾಶ ದೊರೆಯುವುದರಿಂದ ಕೆಎಲ್ ರಾಹುಲ್ ರನ್ನು ಹಿಂದಿಕ್ಕಬಹುದು. ಇವರಿಬ್ಬರಲ್ಲಿ ಯಾರು ಹಿಂದಿಕ್ಕುತ್ತಾರೆ ಎಂದು ಕಾದು ನೋಡಬೇಕಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...