alex Certify ಈ ಬಾರಿಯ IPL ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಯಾವುದು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬಾರಿಯ IPL ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಯಾವುದು ಗೊತ್ತಾ…..?

ಈ ಬಾರಿಯ ಐಪಿಎಲ್ ನಲ್ಲಿ ಈಗಾಗಲೇ 29 ಪಂದ್ಯಗಳು ನಡೆದಿದ್ದು ನಿನ್ನೆಯ 1 ಪಂದ್ಯ ರದ್ದಾಗಿದೆ. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ ಮೊದಲನೇ ಪಂದ್ಯದಲ್ಲಿ ಆರ್ ಸಿ ಬಿ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು ಈ ಪಂದ್ಯ ಹಾಟ್ ಸ್ಟಾರ್ ಆ್ಯಪ್ ನಲ್ಲಿ 6.7 ಮಿಲಿಯನ್ ವೀವ್ಸ್ ಗಳಿಸಿತ್ತು ಎಂದು ಹೇಳಲಾಗಿದೆ.

ಕೆಕೆಆರ್ ನಂತ್ರ ಚೆನ್ನೈ ತಂಡಕ್ಕೂ ಕೊರೊನಾ ಗುಮ್ಮ

ಇನ್ನು ಐಪಿಎಲ್ ನ 15 ನೇ ಪಂದ್ಯವಾದ ಕೆಕೆಆರ್ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್ ನಡುವಣ ಪಂದ್ಯ 7 ಮಿಲಿಯನ್ ವೀಕ್ಷಣೆ ದಾಖಲಿಸಿತ್ತು. ಶನಿವಾರದಂದು ನಡೆದ ಐಪಿಎಲ್ ನ 27ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್ ನಡುವೆ ರೋಮಾಂಚನಕಾರಿ ಪಂದ್ಯ ನಡೆದಿತ್ತು ಈ ಪಂದ್ಯ ಬರೋಬ್ಬರಿ 8.4 ಮಿಲಿಯನ್ ವೀಕ್ಷಣೆ ಪಡೆದು ಈ ಬಾರಿಯ ಐಪಿಎಲ್ ನಲ್ಲೇ ಅತ್ಯಧಿಕ ವೀಕ್ಷಣೆ ಪಡೆದ ಪಂದ್ಯವಾಗಿದೆ. ಕೈರನ್ ಪೊಲಾರ್ಡ್ ಈ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ 87 ರನ್ ಗಳಿಸಿದ್ದರು, ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ 4 ವಿಕೆಟ್ ಗಳ ರೋಚಕ ಜಯ ಸಾಧಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...