HomeKarnatakaಅರ್ಹ ದಾಖಲೆ ನೀಡಿದವರಿಗೆ ಪಿಂಚಣಿ ಮುಂದುವರಿಕೆ, ಆದಾಯ ಮಿತಿ ಹೆಚ್ಚಳ

ಅರ್ಹ ದಾಖಲೆ ನೀಡಿದವರಿಗೆ ಪಿಂಚಣಿ ಮುಂದುವರಿಕೆ, ಆದಾಯ ಮಿತಿ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಅರ್ಹ ಪಿಂಚಣಿ ಫಲಾನುಭವಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪರಿಷ್ಕರಣೆ ನಡೆಸಲಾಗಿತ್ತು. ತೆರಿಗೆ ಪಾವತಿದಾರರು, ನಿಗದಿತ ವಯಸ್ಸಾಗದವರು, ಸರ್ಕಾರಿ ನೌಕರರು ಪಿಂಚಣಿ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಸುಮಾರು 23 ಲಕ್ಷ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಂಡಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಪ್ರಸ್ತುತ ಪಿಂಚಣಿ ಸ್ಥಗಿತಗೊಂಡವರಿಗೆ ಸೂಕ್ತ ದಾಖಲೆಗಳನ್ನು ಒದಗಿಸುವ ಅವಕಾಶವನ್ನು ನೀಡಲಾಗಿದ್ದು, ಪರಿಶೀಲಿಸಿ ಅರ್ಹರಿಗೆ ಪಿಂಚಣಿ ಮುಂದುವರಿಸಲಾಗುವುದು. ಪಿಂಚಣಿದಾರರ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಈಗಾಗಲೇ ಪಿಂಚಣಿ ಪಡೆಯಲು ಇರುವ ಗರಿಷ್ಠ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಪಿಂಚಣಿ ಅರ್ಹರಿಗಷ್ಟೇ ತಲುಪಬೇಕು, ದುರುಪಯೋಗವಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

ವಿದೇಶಗಳ ಪ್ರಮುಖ ನಗರಗಳ ಸೆಂಟರ್‌ಗಳಲ್ಲಿ ಅಳವಡಿಸಲಾಗಿರುವ ಆಧುನಿಕ ಎಲ್‌ಇಡಿ ಸ್ಕ್ರೀನ್‌ಗಳು ಆಯಾ ನಗರಗಳ ಆಕರ್ಷಣೀಯ ತಾಣಗಳಾಗಿವೆ. ಉದಾಹರಣೆಗೆ ನ್ಯೂಯಾರ್ಕ್‌ ನಗರದಲ್ಲಿ ನ್ಯೂಯಾರ್ಕ್‌ ಸ್ಕ್ವೇರ್‌. ಇದೇ ಮಾದರಿಯಲ್ಲಿ ನಮ್ಮ ತುಮಕೂರು ನಗರಕ್ಕೂ ಆಧುನಿಕ ಸ್ಪರ್ಷ ನೀಡಬೇಕು. ನಗರ ಸೌಂದರ್ಯವನ್ನು ವೃದ್ಧಿಸಬೇಕು, ಜೊತೆಗೆ ನಮ್ಮ ಜನಸಾಮಾನ್ಯರಿಗೆ ಸರ್ಕಾರದ ಕಾರ್ಯಕ್ರಮಗಳು, ಪ್ರವಾಸಿ ಸ್ಥಳಗಳು, ಐತಿಹಾಸಿಕ ಕೇಂದ್ರಗಳು, ದೇವಸ್ಥಾನಗಳು ಮತ್ತಿತರ ದೂರದ ಪ್ರದೇಶಗಳ ಪರಿಚಯ ಸಿಗುವಂತಾಗಬೇಕು ಎಂಬ ಕಾರಣಕ್ಕೆ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ಬೃಹತ್‌ ಆಧುನಿಕ ಡಿಸ್‌ಪ್ಲೇ ಬೋರ್ಡ್‌ಅನ್ನು ಅಳವಡಿಸುತ್ತಿದ್ದೇವೆ. 7 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿರುವ ಡಿಸ್‌ಪ್ಲೇಯಿಂದ ತುಮಕೂರು ದಸರಾಗೆ ಹೆಚ್ಚಿನ ಮೆರುಗು ಸಿಗಲಿದೆ. ಇದು ಕೇವಲ ದಸರಾ ಪ್ರಯುಕ್ತ ಅಳವಡಿಸುತ್ತಿರುವುದಲ್ಲ, ಶಾಶ್ವತವಾಗಿ ಇರಲಿದೆ. ತುಮಕೂರು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬರದ ಸಂಕಷ್ಟವಿದ್ದರೂ ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಪ್ರತಿಯೊಬ್ಬರಿಗೂ ಸಮಯಕ್ಕೆ ಸರಿಯಾಗಿ ಅಗತ್ಯ ಆರೋಗ್ಯ ಸೇವೆ ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಆದ್ಯತೆ. ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಬರದಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಮೇಲೂ ನಿರಂತರ ನಿಗಾ ವಹಿಸಲಾಗುತ್ತಿದೆ. ಸಂಕಷ್ಟದ ಸಮಯದಲ್ಲಿ ಜನರ ಆರೋಗ್ಯವೇ ಮೊದಲ ಆದ್ಯತೆ. ಆರೋಗ್ಯ ಸೇವೆಯಲ್ಲಿ ಯಾವುದೇ ಕೊರತೆಯಾಗದಂತೆ ಸರ್ಕಾರ ಸಂಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಡಿಸಿಎಂ ತಿಳಿಸಿದ್ದಾರೆ.

ರೈತರಿಗೆ ಸಾಲದ ಹೆಸರಿನಲ್ಲಿ ಒತ್ತಡ, ಕಿರುಕುಳ ನೀಡುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರೈತರ ನೆಮ್ಮದಿ ಮತ್ತು ಗೌರವವನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಹಾವಳಿಗೆ ಕಡಿವಾಣ ಹಾಕಲು ಕಾನೂನು ರೂಪಿಸಿ ಕಠಿಣ ಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈತರು ಹಾಗೂ ದುರ್ಬಲ ವರ್ಗದ ಜನರಿಗೆ ಅನಗತ್ಯ ಕಿರುಕುಳ ನೀಡದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ರೈತರ ಬೆನ್ನಿಗೆ ಸರ್ಕಾರವಿದೆ. ಕಾನೂನು ಮೀರಿ ರೈತರಿಗೆ ಒತ್ತಡ ಅಥವಾ ಕಿರುಕುಳ ನೀಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರ ಹಿತದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular