HomeAstro‘ಹೊಸ ಬಾಬಾ ವಂಗಾ’ ಸೆಲೀನಾ ಅವಲಾನ್ ಭವಿಷ್ಯ: ಇರಾನ್ ಸುಪ್ರೀಂ ಲೀಡರ್ ಹತ್ಯೆ, ಟ್ರಂಪ್ ಅಧಿಕಾರ...

‘ಹೊಸ ಬಾಬಾ ವಂಗಾ’ ಸೆಲೀನಾ ಅವಲಾನ್ ಭವಿಷ್ಯ: ಇರಾನ್ ಸುಪ್ರೀಂ ಲೀಡರ್ ಹತ್ಯೆ, ಟ್ರಂಪ್ ಅಧಿಕಾರ ತ್ಯಾಗ ಮತ್ತು ವಿಶ್ವಯುದ್ಧದ ಆತಂಕ!

ಲಂಡನ್: ಜಗತ್ತಿನ ಪ್ರಮುಖ ವಿದ್ಯಮಾನಗಳ ಬಗ್ಗೆ ನಿಖರ ಭವಿಷ್ಯ ಹೇಳುವ ಮೂಲಕ ‘ಹೊಸ ಬಾಬಾ ವಂಗಾ’ ಎಂದೇ ಖ್ಯಾತಿ ಪಡೆದಿರುವ ಅತೀಂದ್ರಿಯ ಶಕ್ತಿ ಹೊಂದಿರುವ ಸೆಲೀನಾ ಅವಲಾನ್, ಈಗ ಇರಾನ್-ಇಸ್ರೇಲ್ ಸಂಘರ್ಷದ ಬಗ್ಗೆ ಭೀಕರ ಭವಿಷ್ಯ ನುಡಿದಿದ್ದಾರೆ. ಬ್ರಿಟನ್ ಮಾಜಿ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ಮತ್ತು ಪೋಪ್ ಫ್ರಾನ್ಸಿಸ್ ಅವರ ಸಾವಿನ ಬಗ್ಗೆ ಈ ಹಿಂದೆ ಸರಿಯಾದ ಭವಿಷ್ಯ ಹೇಳಿದ್ದ ಸೆಲೀನಾ, ಈಗಿನ ಯುದ್ಧದ ಪರಿಸ್ಥಿತಿಯು ಮೂರನೇ ವಿಶ್ವಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಎಚ್ಚರಿಸಿದ್ದಾರೆ.

ಐರಿಶ್ ಮಿರರ್ ವರದಿಯ ಪ್ರಕಾರ, ಇರಾನ್‌ನ ಸುಪ್ರೀಂ ಲೀಡರ್ ಖಮೇನಿ ಅವರ ಹತ್ಯೆ ನಡೆಯಲಿದೆ ಮತ್ತು ಅಮೆರಿಕದ ಪಡೆಗಳು ಅವರ ಹತ್ತಿರ ತಲುಪಲಿವೆ ಎಂದು ಸೆಲೀನಾ ಭವಿಷ್ಯ ನುಡಿದಿದ್ದಾರೆ. ಖಮೇನಿ ನಂತರ ಇರಾನ್‌ನಲ್ಲಿ ಸರ್ವಾಧಿಕಾರಿಗಳ ಸರಣಿಯೇ ಬರಲಿದೆ. ಮೂರನೇ ಸುಪ್ರೀಂ ಲೀಡರ್ ನೋಡಲು ನೆಪೋಲಿಯನ್‌ನಂತೆ ‘ಆಲ್ಫಾ ಮೇಲ್’ ಗುಣ ಹೊಂದಿದ್ದು, ಅಮೆರಿಕದ ವಿರುದ್ಧ ತೀವ್ರವಾಗಿ ಪ್ರತಿಕಾರ ತೀರಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇನ್ನು ಅಮೆರಿಕದ ಬಗ್ಗೆಯೂ ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿರುವ ಸೆಲೀನಾ, “ಇದು ಡೊನಾಲ್ಡ್ ಟ್ರಂಪ್ ಅವರು ಯುದ್ಧದ ನಾಯಕನಾಗಿ ಹೊರಹೊಮ್ಮುವ ಕಾಲ. ಆದರೆ ಅವರ ಮೇಲೆ ಮತ್ತೊಮ್ಮೆ ಹತ್ಯೆಯ ಯತ್ನ ನಡೆಯಲಿದೆ. ಆರೋಗ್ಯದ ಕಾರಣಗಳಿಂದಾಗಿ ಟ್ರಂಪ್ ಅವರು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಮತ್ತು ಜೆ.ಡಿ. ವ್ಯಾನ್ಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ” ಎಂದು ಭವಿಷ್ಯ ನುಡಿದಿದ್ದಾರೆ. ಅಂತಿಮವಾಗಿ ಇರಾನ್ ದೇಶವು ದುಬೈನಂತೆ ಅಭಿವೃದ್ಧಿ ಹೊಂದಲಿದೆ ಮತ್ತು ಅಮೆರಿಕ-ಇಸ್ರೇಲ್ ಸೇರಿ ರೋಮನ್ ಸಾಮ್ರಾಜ್ಯದಂತಹ ಹೊಸ ಶಕ್ತಿಯನ್ನು ಸೃಷ್ಟಿಸಲಿವೆ ಎಂದು ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಗತ್ತು ಈಗ ‘timeline split’ ಅಂದರೆ ಒಂದು ಮಹತ್ವದ ಬದಲಾವಣೆಯ ಹಂತದಲ್ಲಿದೆ. ಜನರು ಸಕಾರಾತ್ಮಕವಾಗಿ ಜಾಗೃತಗೊಳ್ಳಬೇಕು ಅಥವಾ ನಕಾರಾತ್ಮಕ ಹಾದಿಯಲ್ಲಿ ಮುಳುಗಬೇಕು ಎಂಬ ನಿರ್ಣಾಯಕ ಘಟ್ಟದಲ್ಲಿದ್ದೇವೆ ಎಂದು ಸೆಲೀನಾ ಎಚ್ಚರಿಸಿದ್ದಾರೆ. ವಿಜ್ಞಾನ ಮತ್ತು ಸ್ವಂತ ಅನುಭವದ ಆಧಾರದ ಮೇಲೆ ನಾನು ಈ ಭವಿಷ್ಯ ಹೇಳುತ್ತಿದ್ದೇನೆ ಎಂದು ಅವರು ಪ್ರತಿಪಾದಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular