ಬೆಂಗಳೂರು: ಆಟೋ ಚಾಲನಾ ತರಬೇತಿ ಪಡೆದಿದ್ದ 20 ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಉಚಿತ ಎಲೆಕ್ಟ್ರಿಕ್ ಆಟೋ ವಿತರಿಸಿದ್ದಾರೆ.
ಬಿ ಪ್ಯಾಕ್ ಮತ್ತು ಸಿಜಿಐ ಸಹಯೋಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಚಿವರು ಎಲೆಕ್ಟ್ರಿಕ್ ಆಟೋ ವಿತರಿಸಿ ಮಾತನಾಡಿ, ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಸರ್ಕಾರದಿಂದ ಸಬ್ಸಿಡಿ ಯೋಜನೆಯ ಎಲೆಕ್ಟ್ರಿಕ್ ಆಟೋ ಪಡೆಯಲು ಅಗತ್ಯವಿರುವ ಸಹಾಯ ಕಲ್ಪಿಸುವುದಾಗಿ ಹೇಳಿದ್ದಾರೆ.
ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ಆಟೋ ಚಾಲನೆ ತರಬೇತಿ ನೀಡುವ ಜೊತೆಗೆ ಅವರನ್ನು ಆರ್ಥಿಕವಾಗಿ ಸಬಲರಾಗಿಸಲು ಉಚಿತವಾಗಿ ಆಟೋ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರ್ಕಾರದಿಂದಲೂ ಮಹಿಳೆಯರಿಗೆ ಎಲೆಕ್ಟ್ರಿಕ್ ಆಟೋ ಖರೀದಿ ವೇಳೆ ಸಬ್ಸಿಡಿ ಕಲ್ಪಿಸಲಾಗುವುದು. ಚಾಲನಾ ತರಬೇತಿ ವೇಳೆ ಅವರಿಗೆ ಮೊದಲ ಆದ್ಯತೆ ನೀಡುವಂತೆ ಸೂಚನೆ ನೀಡಲಾಗುವುದು. ತಮ್ಮ ಸಂಸ್ಥೆಯಿಂದಲೇ ಹತ್ತು ಎಲೆಕ್ಟ್ರಿಕ್ ಆಟೋಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ.

