HomeSpecialಪರರ ತಟ್ಟೆಗೆ ಕೈ ಹಾಕಿ ಪೇಚಿಗೆ ಸಿಲುಕಿದ ಯುವತಿ: ಮೊಮೊಸ್ ಪ್ರಾಂಕ್ ಉಲ್ಟಾ ಹೊಡೆದಿದ್ದು ಹೀಗೆ

ಪರರ ತಟ್ಟೆಗೆ ಕೈ ಹಾಕಿ ಪೇಚಿಗೆ ಸಿಲುಕಿದ ಯುವತಿ: ಮೊಮೊಸ್ ಪ್ರಾಂಕ್ ಉಲ್ಟಾ ಹೊಡೆದಿದ್ದು ಹೀಗೆ

ಸೋಷಿಯಲ್ ಮೀಡಿಯಾ ಯುಗದಲ್ಲಿ ಪ್ರಾಂಕ್ ವಿಡಿಯೋಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಭಿನ್ನವಾಗಿ ಏನಾದರೂ ಮಾಡಿ ಜನರ ಗಮನ ಸೆಳೆಯಬೇಕು, ಲಕ್ಷಾಂತರ ವೀಕ್ಷಣೆಗಳನ್ನು ಪಡೆಯಬೇಕು ಎಂಬ ಹಂಬಲ ಕೆಲವೊಮ್ಮೆ ಪ್ರಾಣಕ್ಕೆ ಸಂಕಟ ತಂದೊಡ್ಡುವುದೂ ಉಂಟು. ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ಚಂಡೀಗಢದ ಮೊಮೊಸ್ ಅಂಗಡಿಯೊಂದರ ಬಳಿ ನಡೆದಿದ್ದು, ಅದರ ವಿಡಿಯೋ ಈಗ ಅಂತರಜಾಲದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಚಂಡೀಗಢದ ರಸ್ತೆ ಬದಿಯ ಮೊಮೊಸ್ ಸ್ಟಾಲ್‌ನಲ್ಲಿ ವ್ಯಕ್ತಿಯೊಬ್ಬರು ನೆಮ್ಮದಿಯಾಗಿ ಕುಳಿತು ಮೊಮೊಸ್ ಸವಿಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ಯುವತಿಯೊಬ್ಬರು, ಅವರ ಪಕ್ಕದಲ್ಲೇ ಕುಳಿತು ಯಾವುದೇ ಮುನ್ಸೂಚನೆ ನೀಡದೆ ಅವರ ತಟ್ಟೆಯಲ್ಲಿದ್ದ ಮೊಮೊಸ್ ಎತ್ತಿ ತಿನ್ನಲು ಶುರು ಮಾಡಿದರು. ಇದನ್ನು ಕಂಡು ಆ ವ್ಯಕ್ತಿ ದಿಗ್ಭ್ರಮೆಗೊಂಡರೂ, ಆಕೆಯನ್ನು ತಡೆಯದೆ ಶಾಂತವಾಗಿಯೇ ಪ್ರತಿಕ್ರಿಯಿಸಿದರು. ತಾನು ಯಾರೆಂದು ನಿಮಗೆ ತಿಳಿದಿದೆಯೇ ಎಂದು ಆಕೆ ಕೇಳಿದಾಗಲೂ ಅವರು ಸಮಾಧಾನದಿಂದಲೇ ಉತ್ತರಿಸಿದರು.

ಆದರೆ ಅಸಲಿ ಟ್ವಿಸ್ಟ್ ಸಿಕ್ಕಿದ್ದೇ ಆಮೇಲೆ. ತಟ್ಟೆಯಲ್ಲಿದ್ದ ಮೊಮೊಸ್ ಸವಿಯುತ್ತಿದ್ದ ಯುವತಿ, ಅಚಾನಕ್ ಆಗಿ ಇದು ಸಸ್ಯಾಹಾರವೇ ಅಥವಾ ಮಾಂಸಾಹಾರವೇ ಎಂದು ಆ ವ್ಯಕ್ತಿಯನ್ನು ಕೇಳಿದ್ದಾಳೆ. ಅದಕ್ಕೆ ಅವರು ಇದು ಚಿಕನ್ ಮೊಮೊಸ್ ಎಂದು ಉತ್ತರಿಸಿದ ತಕ್ಷಣ ಯುವತಿಯ ಮುಖದ ಬಣ್ಣ ಬದಲಾಗಿದೆ. ಯಾಕೆಂದರೆ ಆಕೆ ಅಪ್ಪಟ ಸಸ್ಯಾಹಾರಿಯಾಗಿದ್ದು, ತಾನು ತಿಂದಿದ್ದು ಮಾಂಸಾಹಾರ ಎಂದು ತಿಳಿದ ಕೂಡಲೇ ಅಲ್ಲಿಂದ ಎದ್ದು ಹೋಗಿ ವಾಂತಿ ಮಾಡಿಕೊಂಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ಸದ್ಯ ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸಖತ್ ವೈರಲ್ ಆಗಿದ್ದು, ಈವರೆಗೆ ಸುಮಾರು 20 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ನೆಟ್ಟಿಗರು ಈ ವಿಡಿಯೋ ನೋಡಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಇನ್‌ಸ್ಟಂಟ್ ಕರ್ಮ ಎಂದು ಕರೆದರೆ, ಇನ್ನು ಕೆಲವರು ಕಂಟೆಂಟ್ ಮಾಡಲು ಹೋಗಿ ಕಾಂಡ ಮಾಡಿಕೊಂಡಳು ಎಂದು ವ್ಯಂಗ್ಯವಾಡಿದ್ದಾರೆ. ಮಾಂಸಾಹಾರ ಎಂಬುದು ತಿಳಿಯುವವರೆಗೂ ಆಕೆಗೆ ಅದರ ರುಚಿ ಚೆನ್ನಾಗಿಯೇ ಹತ್ತಿತ್ತು ಎಂದು ಹಲವರು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಪರರ ತಟ್ಟೆಗೆ ಕೈ ಹಾಕುವ ಮುನ್ನ ಎಚ್ಚರವಿರಲಿ ಎಂಬ ಪಾಠವನ್ನು ಈ ಘಟನೆ ಸಾರುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular