ಅಮೆರಿಕದ ಈಶಾನ್ಯ ಪ್ರಾಂತ್ಯಗಳಲ್ಲಿ ಭೀಕರ ಹಿಮಪಾತ ಮತ್ತು ಬಿರುಗಾಳಿ (Winter Storm Hernando) ತಾಂಡವವಾಡುತ್ತಿದ್ದು, ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ಮತ್ತು ಸೋಮವಾರದ ಅವಧಿಯಲ್ಲಿ ದೇಶಾದ್ಯಂತ ಸುಮಾರು 10,000ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲೇ ಸಿಲುಕಿಕೊಂಡಿದ್ದಾರೆ.
ಹೌದು. ಅಮೆರಿಕದಾದ್ಯಂತ ಬೀಸುತ್ತಿರುವ ಭೀಕರ ಹಿಮಪಾತಕ್ಕೆ (Snowstorm) ಪ್ರಮುಖ ನಗರಗಳು ಗಡಗಡ ನಡುಗುತ್ತಿವೆ. ವಿಶೇಷವಾಗಿ ನ್ಯೂಯಾರ್ಕ್ ನಗರ ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಲಕ್ಷಾಂತರ ಕುಟುಂಬಗಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.
ಹಿಮಪಾತದ ತೀವ್ರತೆಯಿಂದಾಗಿ ದೇಶಾದ್ಯಂತ ಸುಮಾರು 10,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ.ಟೆನ್ನೆಸ್ಸೀ, ಮಿಸ್ಸಿಸ್ಸಿಪ್ಪಿ, ಟೆಕ್ಸಾಸ್, ಲೂಸಿಯಾನ, ಕೆಂಟುಕಿ, ಜಾರ್ಜಿಯಾ, ವರ್ಜೀನಿಯಾ ಮತ್ತು ಅಲಬಾಮಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಿಮದ ಅಬ್ಬರ ಜೋರಾಗಿದ್ದು, ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ಅಗತ್ಯ ವಸ್ತುಗಳ ಕೊರತೆ: ಜನರಿಗೆ ದೈನಂದಿನ ಅಗತ್ಯ ವಸ್ತುಗಳು ಸಿಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗಳು ಹಿಮದಿಂದ ಆವೃತವಾಗಿರುವುದರಿಂದ ಸಂಚಾರವೂ ಬಂದ್ ಆಗಿದೆ.
ಅಧ್ಯಕ್ಷರ ಪ್ರತಿಕ್ರಿಯೆ: ಈ ಹಿಮಪಾತವನ್ನು ‘ಐತಿಹಾಸಿಕ ದುರಂತ’ ಎಂದು ಕರೆದಿರುವ ಅಧ್ಯಕ್ಷರು, ಪೀಡಿತ ರಾಜ್ಯಗಳಿಗೆ ಫೆಡರಲ್ ತುರ್ತು ನೆರವು ನೀಡಲು ಅನುಮೋದನೆ ನೀಡಿದ್ದಾರೆ. ಜನರು ಸುರಕ್ಷಿತವಾಗಿರಲು ಮತ್ತು ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.
ನ್ಯೂಯಾರ್ಕ್ ಪರಿಸ್ಥಿತಿ: ಮಂಜುಗಡ್ಡೆಯ ಮಳೆಯಿಂದಾಗಿ ರಸ್ತೆಗಳು ಅಪಾಯಕಾರಿಯಾಗಿದ್ದು, ಮತ್ತು ತುರ್ತು ಕೆಲಸಗಳಿಗಾಗಿ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

