HomeLatest Newsಇಂಗ್ಲೆಂಡ್ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಘೋಷಣೆ:ಕಾಂಗರೂ ಪಡೆಗೆ ಆಯ್ಕೆಯಾದ ಭಾರತೀಯ ಮೂಲದ ಆಟಗಾರ!

ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಘೋಷಣೆ:ಕಾಂಗರೂ ಪಡೆಗೆ ಆಯ್ಕೆಯಾದ ಭಾರತೀಯ ಮೂಲದ ಆಟಗಾರ!

ಇಂಗ್ಲೆಂಡ್ ವಿರುದ್ಧದ ಮುಂಬರುವ ಏಕದಿನ ಹಾಗೂ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಹೊಸ ಯುವ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಮಿಚೆಲ್ ಮಾರ್ಷ್ ನಾಯಕತ್ವದ ಈ ಯುವ ಪಡೆಗೆ ಭಾರತೀಯ ಮೂಲದ ಆಲ್‌ರೌಂಡರ್ ನಿಖಿಲ್ ಚೌಧರಿ ಸೇರಿದಂತೆ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.

ಇಂಗ್ಲೆಂಡ್ ವಿರುದ್ಧ ನವೆಂಬರ್ 13 ರಿಂದ 18 ರವರೆಗೆ 3 ಏಕದಿನ ಪಂದ್ಯಗಳು ಹಾಗೂ ನಂತರ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಯು ಯುವ ಆಟಗಾರರ ಪ್ರತಿಭೆಯನ್ನು ಒರೆಗೆ ಹಚ್ಚಲು ನಿರ್ಧರಿಸಿದೆ. ತಂಡದಲ್ಲಿ ಭಾರತೀಯ ಮೂಲದ ನಿಖಿಲ್ ಚೌಧರಿ ಅವರೊಂದಿಗೆ ಮಹ್ಲಿ ಬೀರ್ಡ್‌ಮ್ಯಾನ್, ಜ್ಯಾಕ್ ಎಡ್ವರ್ಡ್ಸ್, ಲಿಯಾಮ್ ಸ್ಪೆನ್ಸರ್, ಜೇಕ್ ಫ್ರೇಸರ್-ಮೆಕ್‌ಗುರ್ಕ್ ಮತ್ತು ಸ್ಯಾಮ್ ಹಾರ್ಪರ್ ಅವರಂತಹ ಉದಯೋನ್ಮುಖ ತಾರೆಯರಿಗೆ ಸ್ಥಾನ ಲಭಿಸಿದೆ.

ಮುಂಬರುವ ನ್ಯೂಜಿಲ್ಯಾಂಡ್ ವಿರುದ್ಧದ ಪ್ರಮುಖ ಟೆಸ್ಟ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಮುಖ ಬೌಲರ್‌ಗಳಾದ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಝಲ್‌ವುಡ್ ಅವರಿಗೆ ಈ ವೈಟ್ ಬಾಲ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಟ್ರ್ಯಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಕ್ಯಾಮರಾನ್ ಗ್ರೀನ್ ಹಾಗೂ ಕೆಎಲ್ ರಾಹುಲ್ ಎದುರು ಮಿಂಚಿದ್ದ ಮ್ಯಾಟ್ ರೇನ್‌ಶಾ ಏಕದಿನ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದು, ಟಿ20 ಸರಣಿಯಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್‌ಲೆಟ್, ಮಹ್ಲಿ ಬೀರ್ಡ್‌ಮ್ಯಾನ್, ನಿಖಿಲ್ ಚೌಧರಿ, ಟಿಮ್ ಡೇವಿಡ್, ಜೋಯಲ್ ಡೇವಿಸ್, ಜ್ಯಾಕ್ ಎಡ್ವರ್ಡ್ಸ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಸ್ಯಾಮ್ ಹಾರ್ಪರ್, ಸ್ಪೆನ್ಸರ್ ಜಾನ್ಸನ್, ಮಿಚ್ ಓವನ್, ಲಾಕ್ಲಾನ್ ಶಾ, ಆಡಮ್ ಝಂಪಾ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular