alex Certify ಹಿಂದಿ ʼರಾಷ್ಟ್ರ ಭಾಷೆʼ ಎಂದು ಹೇಳಿ ಕೆಲಸ ಕಳೆದುಕೊಂಡ ಜೊಮ್ಯಾಟೋ ಸಿಬ್ಬಂದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದಿ ʼರಾಷ್ಟ್ರ ಭಾಷೆʼ ಎಂದು ಹೇಳಿ ಕೆಲಸ ಕಳೆದುಕೊಂಡ ಜೊಮ್ಯಾಟೋ ಸಿಬ್ಬಂದಿ…!

ಹಿಂದಿ ಕಲಿಯಲೇಬೇಕು ಎಂದಿದ್ದ ಜೊಮ್ಯಾಟೋ ಕಂಪನಿ ಸರ್ವೀಸ್​ ಎಕ್ಸಿಕ್ಯೂಟಿವ್​ ವಿರುದ್ಧ ತಮಿಳರ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಫುಡ್​ ಡೆಲಿವರಿ ಕಂಪನಿ ಜೊಮೆಟೋ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.

ತಮಿಳುನಾಡಿನ ವಿಕಾಸ್​ ಎಂಬುವವರು ತಮ್ಮ ಆರ್ಡರ್​ ಪೂರ್ಣವಾಗಿಲ್ಲ ಎಂಬ ವಿಚಾರವಾಗಿ ಜೊಮೆಟೋ ಆ್ಯಪ್​ ಸರ್ವೀಸ್​ ಎಕ್ಸಿಕ್ಯೂಟಿವ್​ ಜೊತೆ ಚಾಟ್​ ಮಾಡಿದ್ದರು. ಈ ವೇಳೆ ಜೊಮ್ಯಾಟೋ ಕಂಪನಿ ಸರ್ವೀಸ್​ ಎಕ್ಸಿಕ್ಯೂಟಿವ್​ ಹಿಂದಿ ಕಲಿಯುವಂತೆ ವಿಕಾಸ್​ಗೆ ಹೇಳಿದ್ದರು. ಈ ಚಾಟ್​ ಸ್ಕ್ರೀನ್​ಶಾಟ್​ಗಳನ್ನು ವಿಕಾಸ್​ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದರು. ಇದಾದ ಬಳಿಕ #reject_zomato ಎಂಬ ಹ್ಯಾಶ್​ಟ್ಯಾಗ್​ ವೈರಲ್​ ಆಗಿತ್ತು.

ಕೊರೊನಾ ಲಸಿಕೆ ಪಡೆಯಲಿರುವ ಮಕ್ಕಳಿಗೆಂದೇ ನಿರ್ಮಾಣವಾಗಿದೆ ಈ ‘ವಿಶಿಷ್ಟ’ ಲಸಿಕಾ ಕೇಂದ್ರ..!

ವಿಕಾಸ್​ ಪೋಸ್ಟ್​ ಮಾಡಿರುವ ಸ್ಕ್ರೀನ್​​ಶಾಟ್​ಗಳಲ್ಲಿ, ಕಸ್ಟಮರ್​ ಸರ್ವೀಸ್​ ಎಕ್ಸಿಕ್ಯೂಟಿವ್​ ಜೊತೆಗಿನ ತಮ್ಮ ಸಂಭಾಷಣೆಯನ್ನು ತೋರಿಸಿದ್ದಾರೆ. ಇದರಲ್ಲಿ ವಿಕಾಸ್​ ತಾವು ಆರ್ಡರ್​ ಮಾಡಿರುವ ಎಲ್ಲಾ ಆಹಾರಗಳು ನನ್ನನ್ನು ತಲುಪಿಲ್ಲ. ಹೀಗಾಗಿ ನನಗೆ ರೀಫಂಡ್​ ಮಾಡುವಂತೆ ಅಪ್ಲಿಕೇಶನ್​ನಲ್ಲಿ ಹೇಳಿದ್ದರು. ಇದಕ್ಕೆ ಕಸ್ಟಮರ್​ ಎಕ್ಸಿಕ್ಯೂಟಿವ್​, ನಿಮಗೆ ಹಿಂದಿ ತಿಳಿದಿಲ್ಲ. ಹೀಗಾಗಿ ರೀಫಂಡ್​ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಕಾಸ್​ ಹಾಗಾದರೆ ತಮಿಳು ಮಾತನಾಡುವವರನ್ನೇ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಜೊಮ್ಯಾಟೋ ಆ್ಯಪ್​ನಿಂದ ಹಿಂದಿ ನಮ್ಮ ರಾಷ್ಟ್ರಭಾಷೆ. ಹೀಗಾಗಿ ಸ್ವಲ್ಪವಾದರೂ ಹಿಂದಿ ಕಲಿತುಕೊಳ್ಳಬೇಕು ಎಂದು ಉತ್ತರ ಬಂದಿತ್ತು.

‌ʼಸಾಕ್ಸ್ʼ ಆರ್ಡರ್‌ ಮಾಡಿದ್ದ ಕಮೆಡಿಯನ್‌ ಗೆ ಬಂದಿದ್ದು ಕಪ್ಪು ಬಣ್ಣದ ಬ್ರಾ…!

ತಮಿಳರ ಆಕ್ರೋಶದ ಬಳಿಕ ಎಚ್ಚೆತ್ತುಕೊಂಡ ಜೊಮ್ಯಾಟೋ ಕಸ್ಟಮರ್​ ಎಕ್ಸಿಕ್ಯೂಟಿವ್​ ಕಡೆಯಿಂದ ಆದ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಿದೆ. ಎಕ್ಸಿಕ್ಯೂಟಿವ್​ ವರ್ತನೆಯು ನಮ್ಮ ಕಂಪನಿಯ ನೀತಿ ನಿಯಮಗಳಿಗೆ ವಿರುದ್ಧವಾಗಿದೆ. ಏಜೆಂಟ್​ ನೀಡಿರುವ ಈ ಹೇಳಿಕೆಯು ನಮ್ಮ ಕಂಪನಿಯ ವೈವಿಧ್ಯತೆಯ ನಿಲುವನ್ನು ಪ್ರತಿನಿಧಿಸುವುದಿಲ್ಲ. ಈ ಸಂಬಂಧ ಏಜೆಂಟ್​ನ್ನು ಅಮಾನತುಗೊಳಿಸಲಾಗಿದೆ.

ಈ ಏಜೆಂಟ್​ ನೀಡಿರುವ ಹೇಳಿಕೆಯು ಭಾಷೆಯ ಬಗ್ಗೆ ನಮ್ಮ ಕಂಪನಿಗೆ ಇರುವ ಗೌರವವನ್ನು ಪ್ರತಿನಿಧಿಸುತ್ತಿಲ್ಲ. ನಾವು ತಮಿಳು ಭಾಷೆಯಲ್ಲಿಯೂ ಆ್ಯಪ್​ ಅಭಿವೃದ್ಧಿ ಮಾಡುತ್ತಿದ್ದೇವೆ. ಹೀಗಾಗಿ ದಯಮಾಡಿ ರಿಜೆಕ್ಟ್‌ ಜೊಮ್ಯಾಟೋ ಕೈ ಬಿಡಿ ಎಂದು ಮನವಿ ಮಾಡಿದೆ.

ವ್ಯಕ್ತಿಯೊಬ್ಬ ವಿರಾಮ ಚಿಹ್ನೆ ಹಾಕುವುದು ಮರೆತಿದ್ದಕ್ಕೆ ಏನಾಯ್ತು ಗೊತ್ತಾ….?: ಇಂಥ ಮಿಸ್ಟೇಕ್ ಮಾಡುವ ಮುನ್ನ ಹುಷಾರ್…!

ಆದರೆ ಕಂಪನಿಯ ಈ ಕ್ರಮಕ್ಕೂ ಸೋಶಿಯಲ್​ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಜೊಮ್ಯಾಟೋ ಕಂಪನಿ ಎಕ್ಸಿಕ್ಯೂಟಿವ್​ ಮಾತಿನಲ್ಲಿ ತಪ್ಪಿದೆ ನಿಜ. ಆದರೆ ಇಷ್ಟಕ್ಕೆ ಒಬ್ಬರ ಕೆಲಸವನ್ನು ಕಸಿದುಕೊಳ್ಳುವುದು ಸೂಕ್ತವಲ್ಲ. ಆ ವ್ಯಕ್ತಿಗೆ ಸರಿಯಾದ ಕ್ರಮವನ್ನು ಕಲಿಸಿ. ಕಂಪನಿ ಎಕ್ಸಿಕ್ಯೂಟಿವ್​ಗೆ ತರಬೇತಿಯ ಅಗತ್ಯವಿದೆ. ಸೂಕ್ತ ತರಬೇತಿ ನೀಡುವ ಬದಲು ಕೆಲಸದಿಂದ ತೆಗೆದಿದ್ದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

— Balajee K Asokan (@BalumaDoluma) October 19, 2021

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...