ಹಿಂದಿ ʼರಾಷ್ಟ್ರ ಭಾಷೆʼ ಎಂದು ಹೇಳಿ ಕೆಲಸ ಕಳೆದುಕೊಂಡ ಜೊಮ್ಯಾಟೋ ಸಿಬ್ಬಂದಿ…! 19-10-2021 3:52PM IST / No Comments / Posted In: Latest News, India, Live News ಹಿಂದಿ ಕಲಿಯಲೇಬೇಕು ಎಂದಿದ್ದ ಜೊಮ್ಯಾಟೋ ಕಂಪನಿ ಸರ್ವೀಸ್ ಎಕ್ಸಿಕ್ಯೂಟಿವ್ ವಿರುದ್ಧ ತಮಿಳರ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಫುಡ್ ಡೆಲಿವರಿ ಕಂಪನಿ ಜೊಮೆಟೋ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ತಮಿಳುನಾಡಿನ ವಿಕಾಸ್ ಎಂಬುವವರು ತಮ್ಮ ಆರ್ಡರ್ ಪೂರ್ಣವಾಗಿಲ್ಲ ಎಂಬ ವಿಚಾರವಾಗಿ ಜೊಮೆಟೋ ಆ್ಯಪ್ ಸರ್ವೀಸ್ ಎಕ್ಸಿಕ್ಯೂಟಿವ್ ಜೊತೆ ಚಾಟ್ ಮಾಡಿದ್ದರು. ಈ ವೇಳೆ ಜೊಮ್ಯಾಟೋ ಕಂಪನಿ ಸರ್ವೀಸ್ ಎಕ್ಸಿಕ್ಯೂಟಿವ್ ಹಿಂದಿ ಕಲಿಯುವಂತೆ ವಿಕಾಸ್ಗೆ ಹೇಳಿದ್ದರು. ಈ ಚಾಟ್ ಸ್ಕ್ರೀನ್ಶಾಟ್ಗಳನ್ನು ವಿಕಾಸ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದರು. ಇದಾದ ಬಳಿಕ #reject_zomato ಎಂಬ ಹ್ಯಾಶ್ಟ್ಯಾಗ್ ವೈರಲ್ ಆಗಿತ್ತು. ಕೊರೊನಾ ಲಸಿಕೆ ಪಡೆಯಲಿರುವ ಮಕ್ಕಳಿಗೆಂದೇ ನಿರ್ಮಾಣವಾಗಿದೆ ಈ ‘ವಿಶಿಷ್ಟ’ ಲಸಿಕಾ ಕೇಂದ್ರ..! ವಿಕಾಸ್ ಪೋಸ್ಟ್ ಮಾಡಿರುವ ಸ್ಕ್ರೀನ್ಶಾಟ್ಗಳಲ್ಲಿ, ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ ಜೊತೆಗಿನ ತಮ್ಮ ಸಂಭಾಷಣೆಯನ್ನು ತೋರಿಸಿದ್ದಾರೆ. ಇದರಲ್ಲಿ ವಿಕಾಸ್ ತಾವು ಆರ್ಡರ್ ಮಾಡಿರುವ ಎಲ್ಲಾ ಆಹಾರಗಳು ನನ್ನನ್ನು ತಲುಪಿಲ್ಲ. ಹೀಗಾಗಿ ನನಗೆ ರೀಫಂಡ್ ಮಾಡುವಂತೆ ಅಪ್ಲಿಕೇಶನ್ನಲ್ಲಿ ಹೇಳಿದ್ದರು. ಇದಕ್ಕೆ ಕಸ್ಟಮರ್ ಎಕ್ಸಿಕ್ಯೂಟಿವ್, ನಿಮಗೆ ಹಿಂದಿ ತಿಳಿದಿಲ್ಲ. ಹೀಗಾಗಿ ರೀಫಂಡ್ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಕಾಸ್ ಹಾಗಾದರೆ ತಮಿಳು ಮಾತನಾಡುವವರನ್ನೇ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಜೊಮ್ಯಾಟೋ ಆ್ಯಪ್ನಿಂದ ಹಿಂದಿ ನಮ್ಮ ರಾಷ್ಟ್ರಭಾಷೆ. ಹೀಗಾಗಿ ಸ್ವಲ್ಪವಾದರೂ ಹಿಂದಿ ಕಲಿತುಕೊಳ್ಳಬೇಕು ಎಂದು ಉತ್ತರ ಬಂದಿತ್ತು. ʼಸಾಕ್ಸ್ʼ ಆರ್ಡರ್ ಮಾಡಿದ್ದ ಕಮೆಡಿಯನ್ ಗೆ ಬಂದಿದ್ದು ಕಪ್ಪು ಬಣ್ಣದ ಬ್ರಾ…! ತಮಿಳರ ಆಕ್ರೋಶದ ಬಳಿಕ ಎಚ್ಚೆತ್ತುಕೊಂಡ ಜೊಮ್ಯಾಟೋ ಕಸ್ಟಮರ್ ಎಕ್ಸಿಕ್ಯೂಟಿವ್ ಕಡೆಯಿಂದ ಆದ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಿದೆ. ಎಕ್ಸಿಕ್ಯೂಟಿವ್ ವರ್ತನೆಯು ನಮ್ಮ ಕಂಪನಿಯ ನೀತಿ ನಿಯಮಗಳಿಗೆ ವಿರುದ್ಧವಾಗಿದೆ. ಏಜೆಂಟ್ ನೀಡಿರುವ ಈ ಹೇಳಿಕೆಯು ನಮ್ಮ ಕಂಪನಿಯ ವೈವಿಧ್ಯತೆಯ ನಿಲುವನ್ನು ಪ್ರತಿನಿಧಿಸುವುದಿಲ್ಲ. ಈ ಸಂಬಂಧ ಏಜೆಂಟ್ನ್ನು ಅಮಾನತುಗೊಳಿಸಲಾಗಿದೆ. ಈ ಏಜೆಂಟ್ ನೀಡಿರುವ ಹೇಳಿಕೆಯು ಭಾಷೆಯ ಬಗ್ಗೆ ನಮ್ಮ ಕಂಪನಿಗೆ ಇರುವ ಗೌರವವನ್ನು ಪ್ರತಿನಿಧಿಸುತ್ತಿಲ್ಲ. ನಾವು ತಮಿಳು ಭಾಷೆಯಲ್ಲಿಯೂ ಆ್ಯಪ್ ಅಭಿವೃದ್ಧಿ ಮಾಡುತ್ತಿದ್ದೇವೆ. ಹೀಗಾಗಿ ದಯಮಾಡಿ ರಿಜೆಕ್ಟ್ ಜೊಮ್ಯಾಟೋ ಕೈ ಬಿಡಿ ಎಂದು ಮನವಿ ಮಾಡಿದೆ. ವ್ಯಕ್ತಿಯೊಬ್ಬ ವಿರಾಮ ಚಿಹ್ನೆ ಹಾಕುವುದು ಮರೆತಿದ್ದಕ್ಕೆ ಏನಾಯ್ತು ಗೊತ್ತಾ….?: ಇಂಥ ಮಿಸ್ಟೇಕ್ ಮಾಡುವ ಮುನ್ನ ಹುಷಾರ್…! ಆದರೆ ಕಂಪನಿಯ ಈ ಕ್ರಮಕ್ಕೂ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಜೊಮ್ಯಾಟೋ ಕಂಪನಿ ಎಕ್ಸಿಕ್ಯೂಟಿವ್ ಮಾತಿನಲ್ಲಿ ತಪ್ಪಿದೆ ನಿಜ. ಆದರೆ ಇಷ್ಟಕ್ಕೆ ಒಬ್ಬರ ಕೆಲಸವನ್ನು ಕಸಿದುಕೊಳ್ಳುವುದು ಸೂಕ್ತವಲ್ಲ. ಆ ವ್ಯಕ್ತಿಗೆ ಸರಿಯಾದ ಕ್ರಮವನ್ನು ಕಲಿಸಿ. ಕಂಪನಿ ಎಕ್ಸಿಕ್ಯೂಟಿವ್ಗೆ ತರಬೇತಿಯ ಅಗತ್ಯವಿದೆ. ಸೂಕ್ತ ತರಬೇತಿ ನೀಡುವ ಬದಲು ಕೆಲಸದಿಂದ ತೆಗೆದಿದ್ದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. Do not fire your employee Zomato. Rather teach him basic things like Hindi is not National language of Union of India. People in Tamilnadu are good enough to converse in English, so employ people who can communicate in a globally understandable language. https://t.co/ZffAlW1Wcp — பாலாஜி (@BalumaDoluma) October 19, 2021 Your company and your know best. But couldn't this be done by sensitising the guy and taking him off the roster till he gets re-trained again?Was the crime so big that we needed to take food from someone's plate, given the job market?Question is directed to us. Not Zomato https://t.co/YpYdoCUQ7H — Priyashmita (@priyashmita) October 19, 2021 Yes the @zomato agent made a mistake & should be penalized.But for someone to lose his job for this?I oppose Hindi imposition too & it is NOT our National language but feel sorry that this should cost someone their job. @zomato pls consider re training your staff not sacking them https://t.co/vo59xol8sb — Sumanth Raman (@sumanthraman) October 19, 2021 Do not fire your employee Zomato. Rather teach him basic things like Hindi is not National language of Union of India. People in Tamilnadu are good enough to converse in English, so employ people who can communicate in a globally understandable language. https://t.co/ZffAlW1Wcp — பாலாஜி (@BalumaDoluma) October 19, 2021