ಕೊರೊನಾ ಏರಿಳಿತ ಮಧ್ಯೆಯೇ ದೇಶದಲ್ಲಿ ಈಗ ಜಿಕಾ ವೈರಸ್ ಹಾವಳಿ ಶುರುವಾಗಿದೆ. ಉತ್ತರ ಪ್ರದೇಶ ಕೆಲವು ಜಿಲ್ಲೆಗಳಲ್ಲಿ 120 ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಕಾನ್ಪುರ ಜಿಲ್ಲೆಯಲ್ಲಿ 123 ಜಿಕಾ ವೈರಸ್ ಪ್ರಕರಣ ಪತ್ತೆಯಾಗಿದೆ. ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಜಿಕಾ ತಡೆಯಲು ಕೆಲವೊಂದು ನೈಸರ್ಗಿಕ ಮಾರ್ಗಗಳನ್ನು ವೈದ್ಯರು ಸೂಚಿಸಿದ್ದಾರೆ.
ಜಿಕಾ ಸೊಳ್ಳೆಗಳಿಂದ ಹರಡುತ್ತದೆ. ಹಾಗಾಗಿ ಜಿಕಾ ವೈರಸ್ ಹರಡುವುದನ್ನು ತಪ್ಪಿಸಲು ಮನೆ ಹಾಗೂ ಮನೆ ಸುತ್ತಮುತ್ತ ಸ್ವಚ್ಛತೆ ವಹಿಸುವುದು ಒಳ್ಳೆಯದು. ಉದ್ದ ತೋಳಿನ ಬಟ್ಟೆ ಧರಿಸಬೇಕು. ಮಕ್ಕಳನ್ನು ಹೊರಗೆ ಬಿಡುವಾಗ ಎಚ್ಚರಿಕೆ ವಹಿಸಬೇಕು. ಸೊಳ್ಳೆ ಪರದೆಗಳನ್ನು ಬಳಸಬೇಕಾಗುತ್ತದೆ.
ಇದಲ್ಲದೆ ಮನೆ ಹಾಗೂ ಮನೆ ಸುತ್ತ ಸೊಳ್ಳೆ ಬರದಂತೆ ಹೊಗೆಯನ್ನು ಹಾಕಬೇಕಾಗುತ್ತದೆ. ಕೆಲ ಗಿಡಮೂಲಿಕೆಗಳನ್ನು ಸುಟ್ಟು, ಅದ್ರ ಹೊಗೆಯನ್ನು ಮನೆ ತುಂಬ ಹರಡುವಂತೆ ಮಾಡಬೇಕು. ಬೇವಿನ ಎಲೆಯ ಹೊಗೆಯನ್ನು ಮನೆಯ ಮೂಲೆ ಮೂಲೆಗೆ ಹಾಕಬೇಕು. ಇದ್ರಿಂದ ಸೊಳ್ಳೆ ಓಡಿ ಹೋಗುತ್ತದೆ.
ಏಳು ದಿನದಲ್ಲಿ ತೂಕ ಇಳಿಬೇಕೆಂದ್ರೆ ಫಾಲೋ ಮಾಡಿ ಈ ಟಿಪ್ಸ್
ಅಮೃತಬಳ್ಳಿ ಕಷಾಯ ಕೂಡ ಜಿಕಾ ವೈರಸ್ ತಡೆಯಲು ನೆರವಾಗುತ್ತದೆ. ಒಂದು ಲೋಟ ನೀರಿಗೆ 2-ಇಂಚಿನ ಅಮೃತಬಳ್ಳಿ ರೆಂಬೆಗಳನ್ನು ಹಾಕಿ ಬಿಸಿ ಮಾಡಬೇಕು. ಇದಕ್ಕೆ ಸ್ವಲ್ಪ ಜೀರಿಗೆ ಹಾಕಬೇಕು. ನೀರು ಚೆನ್ನಾಗಿ ಕುದಿಯಬೇಕು. ನಂತ್ರ ಗ್ಯಾಸ್ ಆಫ್ ಮಾಡಿ, ನೀರು ತಣ್ಣಗಾದ ಮೇಲೆ ಕುಡಿಯಬೇಕು.
ಜಿಕಾ ವೈರಸ್‌ನಿಂದ ದೂರವಿರಲು ಮಹಾಸುದರ್ಶನ ವಟಿ ಕೂಡ ಉತ್ತಮ ಪರಿಹಾರವಾಗಿದೆ. ಮಹಾಸುದರ್ಶನ ವಟಿಯು ಅನೇಕ ಗಿಡಮೂಲಿಕೆಗಳ ಮಿಶ್ರಣವಾಗಿದೆ. ಇದು ಮಾತ್ರೆಗಳ ರೂಪದಲ್ಲಿಯೂ ಲಭ್ಯವಿದೆ. ದಿನಕ್ಕೆ ಒಂದು ಮಾತ್ರೆಯನ್ನು ಸೇವನೆ ಮಾಡಿದರೆ ಒಳ್ಳೆಯದು.
ಶಾರುಖ್ ರ ಸೂಪರ್ ಹಿಟ್ ಚಿತ್ರವೊಂದರ ಸೀನ್ ನಲ್ಲಿನ ಪ್ರಮಾದ ಈಗ ಬಹಿರಂಗ
ಜಿಕಾ ವೈರಸ್ ಜೊತೆಗೆ ಇತರ ಅನೇಕ ರೋಗಗಳ ಅಪಾಯವೂ ಹೆಚ್ಚಾಗಿದೆ. ಇಂಥ ಪರಿಸ್ಥಿತಿಯಲ್ಲಿ ಚ್ಯವನಪ್ರಾಶ ಸೇವಿಸುವುದು ಪ್ರಯೋಜನಕಾರಿ. ಚ್ಯವನಪ್ರಾಶ್ಶವನ್ನು ಅನೇಕ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಜಿಕಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಬೇವಿನ ಮಾತ್ರೆಗಳು, ಕಿತ್ತಳೆ ರಸ, ನಿಂಬೆ ರಸ, ನೆಲ್ಲಿಕಾಯಿ ಮತ್ತು ಇತರ ವಿಟಮಿನ್ ಸಿ ಭರಿತ ಆಹಾರಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ.