alex Certify ‘ಝೌಲಿ’ ನೃತ್ಯದ ವಿಡಿಯೋ ವೈರಲ್​: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಝೌಲಿ’ ನೃತ್ಯದ ವಿಡಿಯೋ ವೈರಲ್​: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ಝೌಲಿ ಎಂದು ಕರೆಯಲ್ಪಡುವ ಗುರೋ ಜನರ ಸಾಂಪ್ರದಾಯಿಕ ನೃತ್ಯವನ್ನು ವಿಶ್ವದ ಅತ್ಯಂತ ಅಸಾಧ್ಯವಾದ ನೃತ್ಯ ಎಂದು ಹೆಸರಿಸಲಾಗಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಇದರ ಮೋಡಿ ಮಾಡುವ ಚಲನೆಗಳ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಗುರೋ ಜನರ ಸಾಂಪ್ರದಾಯಿಕ ವೇಷಭೂಷಣ ಮತ್ತು ವಿಸ್ತಾರವಾದ ಮುಖವಾಡವನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ನೃತ್ಯವು ಕೆಲವು ಮಹಾಕಾವ್ಯದ ಪಾದದ ಚಲನೆಯನ್ನು ತೋರಿಸುತ್ತದೆ. ವಿಡಿಯೋದಲ್ಲಿ ಬಳಸಲಾದ ಹಾಡು ಝೌಲಿ ಸಮಯದಲ್ಲಿ ಬಳಸಿದ ಮೂಲ ಹಾಡಲ್ಲದಿದ್ದರೂ, ನೃತ್ಯವನ್ನು ಆನಂದಿಸಬಹುದಾಗಿದೆ.

ನರ್ತಕಿಯು ತನ್ನ ದೇಹದ ಮೇಲ್ಭಾಗವನ್ನು ಹೇಗೆ ಸ್ಥಿರವಾಗಿ ಇಡುತ್ತಾರೆ ಎಂಬುದನ್ನು ಕಂಡು ಅಚ್ಚರಿ ಪಡುವಂತಾಗುತ್ತದೆ. ಈ ಅಮೋಘ ನೃತ್ಯಕ್ಕೆ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಇಂಥದ್ದೊಂದು ಅದ್ಭುತ ನೃತ್ಯವನ್ನು ನೇರವಾಗಿ ನೋಡಲು ಸಾಧ್ಯವಾಗುವುದಿಲ್ಲ. ಅಂಥವರಿಗೆ ಸಾಮಾಜಿಕ ಜಾಲತಾಣ ಒಂದು ಮಾರ್ಗವಾಗಿದೆ. ಇದರಿಂದ ಹಲವು ಸಂಪ್ರದಾಯಗಳನ್ನು ನಾವು ನೋಡಬಹುದಾಗಿದೆ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...