alex Certify ಗೋವಿಂದನ ‘ಕಿಸಿ ಡಿಸ್ಕೋ ಮೇ ಜಾಯೆ’ಗೆ ಯುವರಾಜ್​ ಸಿಂಗ್​ ಸ್ಟೆಪ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋವಿಂದನ ‘ಕಿಸಿ ಡಿಸ್ಕೋ ಮೇ ಜಾಯೆ’ಗೆ ಯುವರಾಜ್​ ಸಿಂಗ್​ ಸ್ಟೆಪ್​

ಬಾಲಿವುಡ್​ ತಾರೆ ಗೋವಿಂದ ಅವರ ‘ಕಿಸಿ ಡಿಸ್ಕೋ ಮೇ ಜಾಯೆ’ ಹಾಡಿನ ಕುಣಿತಕ್ಕೆ ದೊಡ್ಡ ಅಭಿಮಾನಿಗಳೇ ಇದ್ದಾರೆ. 1998 ರ ಚಲನಚಿತ್ರ ‘ಬಡೆ ಮಿಯಾನ್​ ಛೋಟೆ ಮಿಯಾನ್​’ ನಿಂದ ಗೋವಿಂದ​ ಮತ್ತು ರವೀನಾ ಟಂಡನ್​ ಅಭಿನಯದ ‘ಕಿಸಿ ಡಿಸ್ಕೋ ಮೇ ಜಾಯೆ’ ಪಡ್ಡೆ ಹೈಕಳನ್ನು ಹುಚ್ಚೆದ್ದು ಕುಣಿವಂತೆ ಮಾಡಿತ್ತು. ಹಾಡಿನ ಶೈಲಿ, ಅದಕ್ಕೆ ತಕ್ಕಂತ ಗೋವಿಂದ್​ ಅವರ ಸ್ಟೆಪ್​ ಇನ್ನೂ ಅಚ್ಚಳಿಯದೇ ಉಳಿದಿದೆ. ಅಲ್ಕಾ ಯಾಗ್ನಿಕ್​ ಮತ್ತು ಉದಿತ್​ ನಾರಾಯಣ್​ ಅವರ ಹಾಡು ಇಂದಿಗೂ ಅಭಿಮಾನಿಗಳ ಮೆಚ್ಚಿನದ್ದಾಗಿದೆ.

ಇಂದಿಗೂ ಈ ಹಾಡು ಮತ್ತು ಡ್ಯಾನ್ಸ್​ ಮಾಸಿಲ್ಲ ಎಂಬುದಕ್ಕೆ ಉದಾಹರಣೆ ಎಂಬಂತೆ ಕ್ರಿಕೆಟಿಗ ಯುವರಾಜ್​ ಸಿಂಗ್​ ಅನುಕರಿಸಿ ಗಮನ ಸೆಳೆದಿದ್ದಾರೆ. ವೀಕೆಂಡ್​ ಮಸ್ತಿಯ ವೇಳೆ ಯುವರಾಜ್​ ಸಿಂಗ್​, ಈ ಹಾಡಿಗೆ ಕುಣಿದು ತಮ್ಮ ಇನ್​ಸ್ಟಾಗ್ರಾಮ್​ ಹ್ಯಾಂಡಲ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಯುವರಾಜ್​ ಸಿಂಗ್​ ವಿಡಿಯೋಗೆ “ವೀಕೆಂಡ್​ ವೈಬ್ಸ್​” ಎಂದು ಶೀರ್ಷಿಕೆ ನೀಡಿದ್ದಾರೆ. ಬಿಳಿ ಶರ್ಟ್​ ಮತ್ತು ಜೋಡಿ ಡೆನಿಮ್​ ಧರಿಸಿ ಹಾಡಿಗೆ ನೃತ್ಯ ಮಾಡುತ್ತಿದ್ದು, ಸ್ಥಳ ತಿಳಿದಿಲ್ಲವಾದರೂ, ಯುವರಾಜ್​ ಹಾಡಿನ ಸಿಗ್ನೇಚರ್​ ಸ್ಟೆಪ್ಸ್​ ಮಾಡುವಾಗ ಕೈಯಲ್ಲಿ ಸ್ಪೀಕರ್​ನೊಂದಿಗೆ ಮೆಟ್ಟಿಲುಗಳಿದು ಹೋಗುತ್ತಿರುವುದು ಕಂಡುಬರುತ್ತದೆ.

ಈ ಪೋಸ್ಟ್​ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್​ ವೀಕ್ಷಣೆ ಗಳಿಸಿದ್ದು, 1.9 ಲಕ್ಷ ಲೈಕ್​ ಸಂಗ್ರಹಿಸಿದೆ. ಕ್ರಿಕೆಟ್​ ಅಭಿಮಾನಿಗಳು ಕಾಮೆಂಟ್​ ವಿಭಾಗವನ್ನು ತುಂಬಿಸಿಬಿಟ್ಟಿದ್ದು, ಅನೇಕರು ಕ್ರಿಕೆಟ್​ಗೆ ಹಿಂತಿರುಗುವಂತೆ ವಿನಂತಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...