alex Certify ಅತಿ ಹೆಚ್ಚು ಚಿತ್ರಗಳಲ್ಲಿನ ಅಭಿನಯಕ್ಕಾಗಿ ʼಗಿನ್ನಿಸ್ʼ ದಾಖಲೆಗೆ ಪಾತ್ರರಾಗಿದ್ದಾರೆ ಈ ಖ್ಯಾತ ನಟ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ಹೆಚ್ಚು ಚಿತ್ರಗಳಲ್ಲಿನ ಅಭಿನಯಕ್ಕಾಗಿ ʼಗಿನ್ನಿಸ್ʼ ದಾಖಲೆಗೆ ಪಾತ್ರರಾಗಿದ್ದಾರೆ ಈ ಖ್ಯಾತ ನಟ….!

ಭಾರತೀಯ ಚಲನಚಿತ್ರವು ವಿಶ್ವದ ಅತಿದೊಡ್ಡ ಚಲನಚಿತ್ರ ಉದ್ಯಮಗಳಲ್ಲಿ ಒಂದು. ಪ್ರಾದೇಶಿಕ ಭಾಷೆಗಳಲ್ಲಿ ಬಹುತೇಕ ಸಿನಿಮಾಗಳು ಮೂಡಿಬರುತ್ತಿವೆ. ಅದೆಷ್ಟೋ ನಟ-ನಟಿಯರು ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ, ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ದಾಖಲೆ ಯಾರದ್ದು ಎಂದು ಎಂದಾದರೂ ಯೋಚಿಸಿದ್ದೀರಾ ? ಹಾಗಿದ್ದರೆ, ಯಾರಿರಬಹುದು ? ಬಿಗ್ ಬಿ ಅಮಿತಾಭ್ ಬಚ್ಚನ್, ರಜನಿಕಾಂತ್, ಅಕ್ಷಯ್ ಕುಮಾರ್ ಇರಬಹುದೇ ? ಅಲ್ಲ ಇವರ್ಯಾರು ಅಲ್ಲ, ಹಾಗಿದ್ದರೆ ಯಾರು ?

ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ದಾಖಲೆಯನ್ನು ಹೊಂದಿರುವುದು ತೆಲುಗು ಸಿನಿಮಾದ ನಟ ಕನ್ನೆಗಂಟಿ ಬ್ರಹ್ಮಾನಂದಂ. ದಕ್ಷಿಣ ಭಾರತದ ಈ ಮಹಾನ್ ನಟ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಕ್ಕಾಗಿ ಗಿನ್ನಿಸ್ ವಿಶ್ವದಾಖಲೆಯನ್ನೇ ಮಾಡಿದ್ದಾರೆ. ಈ ಹಾಸ್ಯ ನಟನ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.

1956ರಲ್ಲಿ ಜನಿಸಿದ ಬ್ರಹ್ಮಾನಂದಂ ಅವರು ತೆಲುಗು ಚಲನಚಿತ್ರಗಳಲ್ಲಿನ ಹಾಸ್ಯ ಪಾತ್ರಗಳಿಗೆ ಜನಪ್ರಿಯರಾಗಿದ್ದಾರೆ. ಅತಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಕ್ಕಾಗಿ ನಟ ಗಿನ್ನಿಸ್ ವಿಶ್ವದಾಖಲೆ ಹೊಂದಿದ್ದಾರೆ. ಅವರು ಇಲ್ಲಿಯವರೆಗೆ 1000 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಕಲೆಗೆ ನೀಡಿದ ಕೊಡುಗೆಗಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ʼಪದ್ಮಶ್ರೀʼ ಗೌರವಕ್ಕೆ ಪಾತ್ರರಾಗಿದ್ದಾರೆ.

ಅಂದಹಾಗೆ, ನಟ ಬ್ರಹ್ಮಾನಂದಂ ಅವರು ಆಂಧ್ರಪ್ರದೇಶದ ಸತ್ತೇನಪಲ್ಲಿಯ ಚಗಂಟಿ ವರಿ ಪಾಲೆಮ್ ಗ್ರಾಮದಲ್ಲಿ ಜನಿಸಿದರು. ನಟನ ತಂದೆ ಬಡಗಿ, ಬ್ರಹ್ಮಾನಂದಂರಿಗೆ ಏಳು ಒಡಹುಟ್ಟಿದವರಿದ್ದಾರೆ. ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಬ್ರಹ್ಮಾನಂದಂ, ಅಟ್ಲಿಯಲ್ಲಿ ತೆಲುಗು ಉಪನ್ಯಾಸಕರಾಗಿ ಕೆಲಸ ಮಾಡಿದ್ರು.

ಕಾದಂಬರಿಕಾರ ಮತ್ತು ನಾಟಕಕಾರ ಆದಿ ವಿಷ್ಣು, ಬ್ರಹ್ಮಾನಂದಂ ಅವರನ್ನು ದೂರದರ್ಶನದ (ಡಿಡಿ) ಎನ್‌ಸಿವಿ ಶಶಿಧರ್‌ಗೆ ಪರಿಚಯಿಸಿದರು. ನಂತರ ಅವರು 1985ರಲ್ಲಿ ಡಿಡಿ ತೆಲುಗಿನ ಪಕಪಕಲು ಮೂಲಕ ದೂರದರ್ಶನಕ್ಕೆ ಪದಾರ್ಪಣೆ ಮಾಡಿದರು. ಇವರ ಅಭಿನಯ ಮೆಚ್ಚಿ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಜಂಧ್ಯಾಲ ಆಹಾ ನಾ- ಚಿತ್ರಕ್ಕೆ ಚಾನ್ಸ್ ನೀಡಿದ್ರು. ಅದ್ಭುತ ಪಾತ್ರ ಮಾಡುವ ಮೂಲಕ ಅವರ ಖ್ಯಾತಿ ಹೆಚ್ಚಿತು.

ನಂತರ ಹಿಂತಿರುಗಿ ನೋಡದ ನಟ, ವಿವಿಧ ತೆಲುಗು ಚಲನಚಿತ್ರಗಳಲ್ಲಿ ಅಭಿನಯಿಸಿದ್ರು. ವಿವಾಹ ಭೋಜನಂ, ಚೂಪುಲು ಕಲಿಸಿದ ಶುಭವೇಲಾ, ಬಂಧುವುಲೋಸ್ತುನ್ನರು, ಮುದ್ದುಲ ಮಾವಯ್ಯ, ಜಗದೇಕ ವೀರುಡು ಅತಿಲೋಕ ಸುಂದರಿ, ಬೊಬ್ಬಿಲಿ ರಾಜ ಮತ್ತು ಬಮ್ಮ ಮಾತಾ ಬಂಗಾರು ಬಾಟದಂತಹ ಚಿತ್ರಗಳಲ್ಲಿ ಅವರ ಅಭಿನಯ ಭಾರಿ ಮೆಚ್ಚುಗೆ ಪಡೆದಿದೆ.

ತಮ್ಮ ಮೊದಲ ಪ್ರಮುಖ ಪ್ರಶಸ್ತಿ-ನಂದಿ ಪ್ರಶಸ್ತಿಯನ್ನು 1993 ರಲ್ಲಿ ಪಡೆದ್ರು. ಅತ್ಯುತ್ತಮ ಹಾಸ್ಯನಟನೆಗಾಗಿ ಮನಿ ಚಿತ್ರದಲ್ಲಿ ಖಾನ್ ದಾದಾ ಪಾತ್ರದ ತಮ್ಮ ಅಭಿನಯಕ್ಕಾಗಿ ಈ ಪ್ರಶಸ್ತಿ ಪಡೆದ್ರು. ತೆಲುಗು ಚಲನಚಿತ್ರಗಳಲ್ಲಿನ ಹಿಟ್ ಅಭಿನಯದ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬ್ರಹ್ಮಾನಂದಂ ತಮ್ಮ ಪ್ರತಿ ಚಿತ್ರಕ್ಕೆ 1 ರಿಂದ 2 ಕೋಟಿ ರೂ. ಪಡೆಯುತ್ತಾರೆ. ವರದಿಗಳ ಪ್ರಕಾರ, ಅವರು ಸುಮಾರು 350 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಬ್ರಹ್ಮಾನಂದಂ ಅವರು ಮುಂಬಲಿರುವ ಸಮುದ್ರಕನಿ ಅವರ ಬ್ರೋ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಭಾಷೆಯ ಈ ಚಲನಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಜುಲೈ 28 ರಂದು ಬೆಳ್ಳಿ ಪರದೆಯಲ್ಲಿ ರಿಲೀಸ್ ಆಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...