alex Certify ಅಲ್ಲಾದ್ದೀನ್ ಮ್ಯಾಜಿಕ್ ಕಾರ್ಪೆಟ್ ಅನ್ನು ಮರುಸೃಷ್ಟಿಸಿದ ಯೂಟ್ಯೂಬರ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಲಾದ್ದೀನ್ ಮ್ಯಾಜಿಕ್ ಕಾರ್ಪೆಟ್ ಅನ್ನು ಮರುಸೃಷ್ಟಿಸಿದ ಯೂಟ್ಯೂಬರ್: ವಿಡಿಯೋ ವೈರಲ್

ದುಬೈ: ನಿಮ್ಮ ಬಾಲ್ಯದಲ್ಲಿ ಅಲ್ಲಾದ್ದೀನ್ ಮತ್ತು ಮಾಯಾ ದೀಪದ ನಿಗೂಢ ಪ್ರಪಂಚದ ಬಗ್ಗೆ ನೀವು ಕಥೆಗಳನ್ನು ಕೇಳಿ ಮಂತ್ರಮುಗ್ಧರಾಗಿದ್ದೀರಾ..? ಜನಪ್ರಿಯ ಮಧ್ಯಪ್ರಾಚ್ಯ ಜಾನಪದ ಕಥೆಯು ದೀಪಗಳು ಮತ್ತು ಮ್ಯಾಜಿಕ್ ಕಾರ್ಪೆಟ್‌ಗಳೊಂದಿಗೆ ಮೋಡಿ ಮಾಡುವ ಕಥೆಯಾಗಿದೆ. ಇದೀಗ, ರೈಝ್ಆರ್ ಡೈ ಎಂಬ ಯೂಟ್ಯೂಬರ್ ಆ ಮಾಂತ್ರಿಕ ಪ್ರಪಂಚದ ದೃಶ್ಯವನ್ನು ಮರುಸೃಷ್ಟಿಸಿದ್ದಾನೆ.

ಹೌದು, ತಮ್ಮದೇ ಆದ ಮ್ಯಾಜಿಕ್ ಕಾರ್ಪೆಟ್ ಅನ್ನು ತಯಾರಿಸಿದ ಯೂಟ್ಯೂಬರ್, ಅದರ ಮೇಲೆ ದುಬೈನ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಈ ವಿಡಿಯೋವನ್ನು ಯೂಟ್ಯೂಬ್ ನಲ್ಲೂ ಅಪ್ಲೋಡ್ ಮಾಡಿದ್ದಾರೆ. ಪ್ರಿನ್ಸ್ ಅಲಿಯ ಉಡುಪನ್ನೇ ಹೋಲುವ ಬಟ್ಟೆ ಧರಿಸಿರುವ ಯೂಟ್ಯೂಬರ್ ಈ ಮ್ಯಾಜಿಕ್ ಕಾರ್ಪೆಟ್ ಅನ್ನು ಮರುಸೃಷ್ಟಿಸಿದ್ದಾರೆ. ದುಬೈನ ಬೀದಿಯಲ್ಲಿ ಕಾರ್ಪೆಟ್ ಮೇಲೆ ಈತ ಪ್ರಯಾಣಿಸುತ್ತಿದ್ದರೆ, ನೆರೆದಿದ್ದ ಜನ ಅಚ್ಚರಿಗೊಳಗಾಗಿದ್ದಾರೆ.

ಈ ಯೋಜನೆಯಲ್ಲಿ ಪ್ರತಿ ತಿಂಗಳು 1 ರೂ. ಹೂಡಿ ಎರಡು ಲಕ್ಷ ವಿಮೆ ಪಡೆಯಿರಿ

ವಾಸ್ತವದಲ್ಲಿ, ಎಲೆಕ್ಟ್ರಾನಿಕ್ ಲಾಂಗ್ಬೋರ್ಡ್ ಅನ್ನು ಬಳಸಿದ್ದು, ಅದರ ಮೇಲೆ ಕಾರ್ಪೆಟ್ ಅನ್ನು ಹರಡಿದ್ದಾರೆ. ಅಷ್ಟೇ ಅಲ್ಲ, ಯೂಟ್ಯೂಬರ್ ತನ್ನ ಕಾರ್ಪೆಟ್‌ನಲ್ಲಿ ದುಬೈನ ಸಮುದ್ರದಲ್ಲೂ ಕೂಡ ವಿಹಾರ ಮಾಡಿದ್ದಾನೆ.

ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿರುವ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಜನರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಅಲ್ಲಾದೀನ್ ಮಧ್ಯಕಾಲೀನ ಕಾಲವನ್ನು ತೊರೆದು 21 ನೇ ಶತಮಾನದಲ್ಲಿ ಯಂತ್ರದ ಮೂಲಕ ಬಂದಿಳಿದಂತಿದೆ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...