alex Certify ಕಪಿಗಳ ದಾಳಿಗೆ ಬೆಚ್ಚಿಬಿದ್ದ ದಕ್ಷಿಣ ಅಫ್ರಿಕಾ ಯೂಟ್ಯೂಬರ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪಿಗಳ ದಾಳಿಗೆ ಬೆಚ್ಚಿಬಿದ್ದ ದಕ್ಷಿಣ ಅಫ್ರಿಕಾ ಯೂಟ್ಯೂಬರ್‌…!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ವೈರಲ್‌ ಆಗಿದೆ. ಯೂಟ್ಯೂಬರ್‌ ಲೋಗನ್‌ ಪೌಲ್‌ನನ್ನು ಬೆನ್ನಟ್ಟಿ, ಆತನ ಬಳಿಯಿದ್ದ ವಸ್ತುಗಳನ್ನೆಲ್ಲ ಒಂದು ಪ್ರಾಣಿಗಳ ಸೇನೆ ಕಳ್ಳತನ ಮಾಡಿದೆ…! ಹೌದು, ವಾನರ ಸೇನೆ ಅದು. ಅಂದರೆ, ಮಂಗಗಳ ಹಿಂಡು.

ದಿ ಸನ್‌ ಪತ್ರಿಕೆ ವರದಿ ಮಾಡಿರುವಂತೆ ಕೇಪ್‌ಟೌನ್‌ನಲ್ಲಿನ ಪಾರ್ಕಿಂಗ್‌ ಸ್ಥಳದಲ್ಲಿ ನಡೆದ ಘಟನೆ ಇದು. ಲೋಗನ್‌ ಅವರು ’’ ಓ ಮೈ ಗಾಡ್‌, ವಾಟ್‌ ಟು ಡೂ?,’’ ಎಂದು ಕೂಗಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಎನರ್ಜಿ ಪಾನೀಯದ ಬಾಟಲಿಯನ್ನು ಕಸಿದುಕೊಂಡು ಮಂಗವೊಂದು ಓಡಿ ಹೋಗುತ್ತದೆ.

ಐಟಿ ರಿಟರ್ನ್ಸ್‌ ಹೊಸ ನಿಯಮ…! ತೆರಿಗೆ ಪಾವತಿದಾರರಿಗೆ ಈ ರೀತಿಯಲ್ಲಾಗಲಿದೆ ಪ್ರಯೋಜನ

ಲೋಗನ್‌ ಅವರು ಮಂಗಗಳ ದಾಳಿಯ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಾವಿರಾರು ಜನರಿಂದ ರಿಟ್ವೀಟ್‌ ಆಗಿದೆ. ಆ ಪೈಕಿ ಫ್ಲಾಕೊ ಫ್ರೀ ಎಂಬಾತ ತನ್ನ ಖಾತೆಯಲ್ಲಿ ಅದ್ಭುತವಾಗಿ ಪ್ರತಿಕ್ರಿಯಿಸಿದ್ದಾನೆ. ’’ ಲೋಗನ್‌ ಅವರೇ, ನಿಮ್ಮ ಈ ವಿಡಿಯೊವು ಪಾನೀಯವೊಂದನ್ನು ಮಾರುಕಟ್ಟೆಗೆ ಪರಿಚಯಿಸುವ ಜಾಹೀರಾತಿಗಿಂತ ಕಡಿಮೆ ಇಲ್ಲ. ಉತ್ತಮ ಜಾಹೀರಾತು ಕಾನ್ಸೆಪ್ಟ್‌ ,’’ ಎಂದಿದ್ದಾನೆ. ಅಂದರೆ, ಮಂಗಗಳಿಗೆ ಕೂಡ ಈ ಎನರ್ಜಿ ಡ್ರಿಂಕ್‌ ಬಹಳ ಇಷ್ಟ. ಅದು ಕಸಿಯುವ ತನಕ ನೀವು ಕೂಡ ಎನರ್ಜಿ ಡ್ರಿಂಕ್‌ನ ಬಲದಿಂದ ಚೆನ್ನಾಗಿ ಓಡಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...