alex Certify ಐಟಿ ರಿಟರ್ನ್ಸ್‌ ಹೊಸ ನಿಯಮ…! ತೆರಿಗೆ ಪಾವತಿದಾರರಿಗೆ ಈ ರೀತಿಯಲ್ಲಾಗಲಿದೆ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿ ರಿಟರ್ನ್ಸ್‌ ಹೊಸ ನಿಯಮ…! ತೆರಿಗೆ ಪಾವತಿದಾರರಿಗೆ ಈ ರೀತಿಯಲ್ಲಾಗಲಿದೆ ಪ್ರಯೋಜನ

2022-23ನೇ ಸಾಲಿಗೆ ಹಣಕಾಸು ಆಯವ್ಯಯವನ್ನು ಫೆ. 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದಾರೆ. ಅದರಲ್ಲಿ ತೆರಿಗೆ ಸ್ಪ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಯನ್ನು ಮುಂಬರುವ ವಿತ್ತೀಯ ವರ್ಷಕ್ಕೆ ಘೋಷಿಸಿಲ್ಲ. ಆದರೆ, ತೆರಿಗೆ ಪಾವತಿದಾರರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಅನುಕೂಲ ಮಾಡಿಕೊಡಲಾಗಿದೆ.

ಹೊಸ ಐಟಿಆರ್‌ ನಿಯಮಗಳ ಪ್ರಕಾರ, ಹಣಕಾಸು ವರ್ಷ ಮುಗಿದ ಬಳಿಕ ಎರಡು ವರ್ಷಗಳವರೆಗೆ ತೆರಿಗೆ ಪಾವತಿದಾರರು ತಮ್ಮ ಐಟಿಆರ್‌ ಅಥವಾ ಆದಾಯ ತೆರಿಗೆ ರಿಟರ್ನ್ಸ್‌ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ತಪ್ಪುಗಳಾಗಿದ್ದಲ್ಲಿ ಅಥವಾ ಅಂಕಿ-ಸಂಖ್ಯೆಗಳನ್ನು ಬದಲಾವಣೆ ಮಾಡಬೇಕಿದ್ದಲ್ಲಿ ಈ ಅವಕಾಶ ನೆರವಾಗಲಿದೆ.

ಒಂದು ವೇಳೆ ಹೆಚ್ಚುವರಿ ಆದಾಯವನ್ನು ಮರೆಮಾಚಿದಲ್ಲಿ ಮುಂದಿನ ದಿನಗಳಲ್ಲಿ ಅದರ ಮೇಲೆ ತೆರಿಗೆ ಮತ್ತು ಅದರ ಮೇಲಿನ ಬಡ್ಡಿಯು ಸೇರಿದಂತೆ 25 ರಿಂದ 50% ವರೆಗೆ ಹೆಚ್ಚುವರಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ ಎಚ್ಚರಿಕೆ ಎಂದು ಕೂಡ ಈಗಾಗಲೇ ಐಟಿ ಇಲಾಖೆ ಹೇಳಿದೆ. ಹಾಗಾಗಿ, ಈ ಹೆಚ್ಚುವರಿ ತೆರಿಗೆ ಅಥವಾ ದಂಡ ಹೇರಿಕೆಯಿಂದ ಪಾರಾಗಲು ಐಟಿಆರ್‌ ತಿದ್ದುಪಡಿಗೆ 2 ವರ್ಷಗಳವರೆಗೆ ಅವಕಾಶ ನೀಡಲಾಗಿದೆ.

12 ತಿಂಗಳ ಒಳಗೆ ಐಟಿಆರ್‌ಗೆ ತಿದ್ದುಪಡಿ ಮಾಡಿದಲ್ಲಿ ಹೆಚ್ಚುವರಿ ಆದಾಯದ ಮೇಲೆ 25% ಹೆಚ್ಚುವರಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಿಂದ ಎರಡು ವರ್ಷಗಳ ನಂತರ ತಿದ್ದುಪಡಿ ಮಾಡಲಾಗುವ ಐಟಿಆರ್‌ಗಳಿಗೆ ಅವುಗಳಲ್ಲಿ ನಮೂದಿಸಲಾಗುವ ಹೆಚ್ಚುವರಿ ಆದಾಯಕ್ಕೆ ಶೇ.50ರಷ್ಟು ಬಡ್ಡಿ ಅಥವಾ ಹೆಚ್ಚುವರಿ ತೆರಿಗೆಯನ್ನು ಹೇರಿಕೆ ಮಾಡಲಾಗುವುದು.

ಡಿ. 31ರಂದು ಐಟಿಆರ್‌ ತಿದ್ದುಪಡಿ ಸಲ್ಲಿಕೆಗೆ ಅವಕಾಶವಿದೆ. ಇದಕ್ಕಾಗಿಯೇ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 139ರಲ್ಲಿ ಹೊಸ ಅವಕಾಶ ನೀಡುವ ನಿಯಮವನ್ನು ಸೇರಿಸಲಾಗುತ್ತಿದೆ. ಆದಾಯವನ್ನು ತಪ್ಪಾಗಿ ತೋರಿಸುವ ಹಲವು ಜನರು, ತಿದ್ದುಪಡಿ ಮಾಡಿಕೊಂಡು ನಿಖರವಾದ ಹಣಕಾಸು ವ್ಯವಹಾರದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲು ಕೂಡ ಇದು ಸಹಕಾರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...