alex Certify ಆಗಸದಲ್ಲಿ ಭಾರತದ ಚಿತ್ತಾರ: ಭಾರತೀಯರಿಗೆ ಯೂಟ್ಯೂಬರ್ ಗೌರವ್ ತನೆಜಾ ವಿಶೇಷ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲಿ ಭಾರತದ ಚಿತ್ತಾರ: ಭಾರತೀಯರಿಗೆ ಯೂಟ್ಯೂಬರ್ ಗೌರವ್ ತನೆಜಾ ವಿಶೇಷ ಕೊಡುಗೆ

ಗುರುವಾರ ದೇಶದೆಲ್ಲೆಡೆ 74ನೇ ಗಣರಾಜ್ಯೋತ್ಸವನ್ನ ಸಂಭ್ರಮದಿಂದ ಆಚರಿಸಲಾಗಿದೆ. ಈ ವಿಶೇಷ ದಿನದಂದು ಯೂಟ್ಯೂಬರ್ ಗೌರವ್ ತನೆಜಾ ಹೊಸ ಇತಿಹಾಸವನ್ನ ರಚಿಸಿದ್ದಾರೆ. ಇವರು ಅಮೆರಿಕಾದ ಆಗಸದಲ್ಲಿ ವಿಮಾನದ ಸಹಾಯದಿಂದ ವಿಶಾಲವಾದ ಭಾರತ ನಕ್ಷೆ ರಚಿಸಿದ್ದಾರೆ. ಅದಕ್ಕಾಗಿ ಅವರು 3 ಗಂಟೆ ಸಮಯಾವಕಾಶವನ್ನ ತೆಗೆದುಕೊಂಡಿದ್ದಾರೆ. ಈ 3 ಗಂಟೆಯಲ್ಲಿ ಅವರು 350ಕಿಲೋ ಮೀಟರ್ ದೂರದವರೆಗೆ ಪ್ರಯಾಣ ಬೆಳೆಸಿದ್ದಾರೆ. ಅವರು ಈ ಕೆಲಸಕ್ಕೆ ಪತ್ನಿ ರಿತು ರಾಠಿ ತನೇಜಾ ಸಾಥ್ ಕೊಟ್ಟಿದ್ದಾರೆ.

ಫ್ಲೋರಿಡಾದ ಟಾಮಾ ವಿಮಾನ ನಿಲ್ದಾಣದಿಂದ ಗೌರವ್ ತನೇಜಾ ಮತ್ತು ರಿತು ತನೇಜಾ ಅವರು ತಮ್ಮ ವಿಮಾನ ಪಯಣವನ್ನ ಆರಂಭಿಸಿದ್ದಾರೆ. ತಮ್ಮ ಈ ಪ್ರಯತ್ನ ಯಶಸ್ವಿ ಆಗುವುದರ ಕ್ರೆಡಿಟ್‌ನ್ನ ದೇಶದ ನಾಗರಿಕರಿಗೆ ಕೊಟ್ಟಿದ್ದಾರೆ. ಈ ಖುಷಿಯ ವಿಚಾರವನ್ನ ಗೌರವ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಶೇರ್ ಮಾಡಿ ‘ನಾವು ಹೊಸ ಇತಿಹಾಸ ರಚಿಸಿದ್ದೇವೆ. ನಿಮ್ಮ ಬೆಂಬಲ ಹಾಗೂ ಭಾರತ ಮಾತೆಯ ಆಶೀರ್ವಾದ ಇಲ್ಲದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.’ಎಂದು ಬರೆದಿದ್ದಾರೆ.

‘ಆಸ್ಮಾನ್ ಮೇ ಭಾರತ್’ (ಆಗಸದಲ್ಲಿ ಭಾರತ) ಅನ್ನುವ ಹೆಸರಿನಲ್ಲಿ ಈ ಅಭಿಯಾನವನ್ನ ಮಾಡುವುದಾಗಿ 24 ಜನವರಿ 2023ರಲ್ಲಿ ಹೇಳಿದ್ದರು. ಇನ್ನೊಂದು ಗಮನಿಸಬೇಕಾಗಿರುವ ವಿಷಯ ಏನೆಂದರೆ, ಇವರು ಈ ಮೊದಲೇ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಹೊಂದಿದ್ದಾರೆ. ಅವರ ಈ ಸಾಧನೆಯಿಂದ ಅಭಿಮಾನಿಗಳು ಫುಲ್ ಖುಷ್ ಆಗ್ಹೋಗಿದ್ದಾರೆ.

— Gaurav Taneja (@flyingbeast320) January 26, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...