alex Certify ಮನೆಯಲ್ಲೇ ಕೂತು ಲಕ್ಷ ಲಕ್ಷ ಸಂಪಾದಿಸಲು ಯುಟ್ಯೂಬ್​​ ನೀಡ್ತಿದೆ ಸದಾವಕಾಶ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕೂತು ಲಕ್ಷ ಲಕ್ಷ ಸಂಪಾದಿಸಲು ಯುಟ್ಯೂಬ್​​ ನೀಡ್ತಿದೆ ಸದಾವಕಾಶ..!

ನೀವು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪೈಕಿಯಾಗಿದ್ದರೆ ಮನೆಯಲ್ಲೇ ಕೂತು ಲಕ್ಷ ರೂಪಾಯಿ ಸಂಪಾದಿಸುವ ಸದಾವಕಾಶ ಕೂಡಿ ಬಂದಿದೆ.

ಇನ್​ಸ್ಟಾಗ್ರಾಂ ರೀಲ್ಸ್ ಹಾಗೂ ಟಿಕ್​​ಟಾಕ್​ಗೆ ಠಕ್ಕರ್​ ನೀಡುವ ಸಲುವಾಗಿ ಯುಟ್ಯೂಬ್​​ ಶಾರ್ಟ್ಸ್​ ಎಂಬ ಹೊಸ ವೇದಿಕೆಯನ್ನು ಸೃಷ್ಟಿಸಿತ್ತು. ಇದೀಗ ಈ ವೇದಿಕೆ ಮೂಲಕ ಕಂಟೆಂಟ್​ ಕ್ರಿಯೇಟರ್​ಗಳು ಎಷ್ಟು ಹಣ ಸಂಪಾದಿಸಬಹುದು ಎಂಬ ಐಡಿಯಾವನ್ನ ಯುಟ್ಯೂಬ್​ ಸಂಸ್ಥೆ ನೀಡಿದೆ.

ಯುಟ್ಯೂಬ್​ ಶಾರ್ಟ್ಸ್​ ಫಂಡ್ಸ್​ ರಿಲೀಸ್​ ಮಾಡಲಾಗಿದೆ. 100 ಮಿಲಿಯನ್ ​ನ್ನು ಕ್ರಿಯೆಟರ್​ಗಳಿಗೆ ನೀಡಲಾಗುತ್ತದೆ. 2021 ಹಾಗೂ 22ರಲ್ಲಿ 100 ಮಿಲಿಯನ್​ ನೀಡಲಾಗುತ್ತದೆ. ಪ್ರತಿ ತಿಂಗಳು ಕಂಟೆಂಟ್​ ಕ್ರಿಯೇಟರ್​ಗಳನ್ನು ಸಂಪರ್ಕಿಸಿ ಹಣ ಪಾವತಿ ಮಾಡೋದಾಗಿ ಯುಟ್ಯೂಬ್​ ಹೇಳಿದೆ.

ಯುಟ್ಯೂಬ್​ ನೀಡಿರುವ ಮಾಹಿತಿಯ ಪ್ರಕಾರ ಕಂಟೆಂಟ್​ ಕ್ರಿಯೇಟರ್​ಗಳು ಈ ವೇದಿಕೆಯ ಮೂಲಕ 7400 ರೂಪಾಯಿಯಿಂದ 7 ಲಕ್ಷ 40 ಸಾವಿರ ರೂಪಾಯಿಯವರೆಗೂ ಸಂಪಾದಿಸಬಹುದು ಎಂದು ಹೇಳಿದೆ.

ಪ್ರತಿ ಶಾರ್ಟ್ಸ್ ಎಷ್ಟು ವೀವ್ಸ್ ಸಂಪಾದಿಸಿದೆ ಅನ್ನೋದನ್ನ ಆಧರಿಸಿ ಕಂಟೆಂಟ್​ ಕ್ರಿಯೇಟರ್​ಗಳಿಗೆ ವೇತನ ಪಾವತಿಯಾಗಲಿದೆ ಎಂದು ಕಂಪನಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...