alex Certify ಭಾರತಕ್ಕೆ ಜಾಗತಿಕ ವಿಜಯ: ದೇಶ ವಿರೋಧಿ ವಿಷಯ ಪಸರಿಸುತ್ತಿದ್ದ19 ಚಾನೆಲ್‌ಗಳನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದ ಯೂಟ್ಯೂಬ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ಜಾಗತಿಕ ವಿಜಯ: ದೇಶ ವಿರೋಧಿ ವಿಷಯ ಪಸರಿಸುತ್ತಿದ್ದ19 ಚಾನೆಲ್‌ಗಳನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದ ಯೂಟ್ಯೂಬ್..!

ಭಾರತದ ವಿರುದ್ಧ ಗಂಭೀರ ಸ್ವರೂಪದ ಸುದ್ದಿಗಳನ್ನ, ಫೇಕ್ ವಿಡಿಯೋಗಳನ್ನ ಮಾಡುತ್ತಿದ್ದ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನ ಬ್ಯಾನ್ ಮಾಡಿಸುವಲ್ಲಿ ಯಶಸ್ವಿಯಾಗಿರುವ ಭಾರತ ಜಾಗತಿಕ ವಿಜಯ ಸಾಧಿಸಿದೆ.

ಗಣರಾಜ್ಯೋತ್ಸವಕ್ಕೂ ಮುಂಚೆಯೆ ಸಾಮಾಜಿಕ‌ ಮಾಧ್ಯಮದ ದೈತ್ಯ, “ಯೂಟ್ಯೂಬ್” ಆ್ಯಂಟಿ ಇಂಡಿಯಾ ಚಾನೆಲ್‌ಗಳನ್ನು ಜಾಗತಿಕವಾಗಿ ಬ್ಯಾನ್ ಮಾಡಿ‌ದೆ.‌ ಇದರಿಂದ ಭಾರತದ ತಾಕತ್ತು ಏನು ಎಂಬುದು ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸಾಬೀತಾಗಿದೆ.

ಜನವರಿ 20 ರಂದು ನಿಷೇಧಿಸಲಾದ ಖಾತೆಗಳಿಗೂ ಇದೇ ರೀತಿಯ ಭವಿಷ್ಯವಿದೆ ಎಂದು ಭಾರತ ಸರ್ಕಾರವು ಆಶಿಸುತ್ತಿದೆ. ಸುಮಾರು ಒಂದು ತಿಂಗಳ ಹಿಂದೆ, ಡಿಸೆಂಬರ್ 21ರಂದು ಭಾರತ ಸರ್ಕಾರವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೂಲಕ 20 ಯೂಟ್ಯೂಬ್ ಚಾನೆಲ್‌ಗಳು ಮತ್ತು ಎರಡು ವೆಬ್‌ಸೈಟ್‌ಗಳನ್ನು ನಿಷೇಧಿಸಿತ್ತು. ಯೂಟ್ಯೂಬ್ ಈಗ ಜಾಗತಿಕವಾಗಿ ಈ 19 ಚಾನಲ್‌ಗಳನ್ನು ನಿಷೇಧಿಸಿದೆ. ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವ ವೆಬ್‌ಸೈಟ್‌ಗಳ ವಿರುದ್ಧ ಮತ್ತಷ್ಟು ಕ್ರಮಗಳನ್ನು ತೆಗೆದುಕೊಂಡಿದೆ.

ಜಾಗತಿಕ ವಲಯದಲ್ಲಿ ಭಾರತದ ಜಯ ನೋಡಿ ಹೆದರಿರುವ, ಹಲವಾರು ಇತರ ಯೂಟ್ಯೂಬ್ ಚಾನೆಲ್‌ಗಳು ಸಹ ಭಾರತ ವಿರೋಧಿ ಪ್ರಚಾರದ ವಿಡಿಯೊಗಳನ್ನು ತೆಗೆದುಹಾಕಲು ಪ್ರಾರಂಭಿಸಿವೆ. I&B ಸಚಿವಾಲಯವು ಯೂಟ್ಯೂಬ್ ನೊಂದಿಗೆ ಸಂಪರ್ಕದಲ್ಲಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಹಲವು ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಬಹುದು ಎಂದು ವರದಿಯಾಗಿದೆ.‌

ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ ಮೂರು ಡಜನ್ ಯೂಟ್ಯೂಬ್ ಚಾನೆಲ್‌ಗಳನ್ನ ವಿಶ್ಲೇಷಣೆಯಲ್ಲಿರಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ಈ ಯೂಟ್ಯೂಬ್ ಚಾನೆಲ್‌ಗಳು ಪೋಸ್ಟ್ ಮಾಡಿದ ಕೆಲವು ವಿಡಿಯೊಗಳನ್ನು ರೆಕಾರ್ಡ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಯೂಟ್ಯೂಬ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಹೆದರಿರುವ ಹಲವು ಚಾನೆಲ್ಗಳು ತಮ್ಮ ಚಾನಲ್ ನಲ್ಲಿರುವ ಭಾರತ-ವಿರೋಧಿ ಕಂಟೆಂಟ್ ಗಳನ್ನ‌ ತೆಗದು ಹಾಕಿವೆ ಎಂದು ಗುರುತಿಸಲಾಗಿದೆ.

ಪಾಕಿಸ್ತಾನಿ‌ ಹಾಗೂ ಇತರ ದೇಶಗಳಿಂದ ಆಪರೇಟ್ ಆಗ್ತಿದ್ದ ದೈತ್ಯ ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಭಾರತ ಡಿಸೆಂಬರ್ 21ರಂದು ಮೊದಲ ಸ್ಟ್ರೈಕ್‌ ಮಾಡಿ ಭಾರತದಲ್ಲಿ‌ ಬ್ಯಾನ್ ಮಾಡಿತು. ಅದಾದ ಒಂದು ತಿಂಗಳ ನಂತರ ಶುಕ್ರವಾರದಂದು, 35 ಯೂಟ್ಯೂಬ್ ಖಾತೆಗಳು, ಎರಡು ಇನ್‌ಸ್ಟಾಗ್ರಾಮ್ ಖಾತೆಗಳು, ಎರಡು ಟ್ವಿಟರ್ ಖಾತೆಗಳು, ಎರಡು ವೆಬ್‌ಸೈಟ್‌ಗಳು ಮತ್ತು ಒಂದು ಫೇಸ್‌ಬುಕ್ ಖಾತೆಯನ್ನ ನಿಷೇಧಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...