alex Certify ಗಮನಿಸಿ: ಇಂಟರ್ನೆಟ್ ವೇಗ ಕಡಿಮೆ ಮಾಡ್ತಿದೆ ಪ್ರತಿ ದಿನ ನಾವು ಕಳುಹಿಸುವ ಈ ʼಸಂದೇಶʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಇಂಟರ್ನೆಟ್ ವೇಗ ಕಡಿಮೆ ಮಾಡ್ತಿದೆ ಪ್ರತಿ ದಿನ ನಾವು ಕಳುಹಿಸುವ ಈ ʼಸಂದೇಶʼ

ಪ್ರತಿ ದಿನ ಬೆಳಿಗ್ಗೆ ಏಳ್ತಿದ್ದಂತೆ ಸ್ನೇಹಿತರು, ಕುಟುಂಬಸ್ಥರಿಂದ ಶುಭೋದಯ ಸಂದೇಶಗಳು ಬರುತ್ತವೆ. ನಾವೂ ಅನೇಕರಿಗೆ ಪ್ರತಿ ದಿನ ಶುಭೋದಯ ಸಂದೇಶವನ್ನು ಕಳುಹಿಸುತ್ತೇವೆ. ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದ ಮೂಲಕ ಶುಭೋದಯ ಸಂದೇಶಗಳು ರವಾನೆಯಾಗುತ್ತವೆ. ಅನೇಕರು ಫೋಟೋಗಳ ಮೂಲಕ ಈ ಸಂದೇಶವನ್ನು ಕಳುಹಿಸುತ್ತಾರೆ.

ಪ್ರತಿ ದಿನ, ಭಾರತದಲ್ಲಿ ಕೋಟ್ಯಾಂತರ ಶುಭೋದಯ ಸಂದೇಶಗಳು ರವಾನೆಯಾಗುತ್ತವೆ. ಈ ಸಂದೇಶಗಳು ಇಂಟರ್ನೆಟ್ ವೇಗವನ್ನು ನಿಧಾನಗೊಳಿಸುತ್ತವೆ. ಬೇರೆ ವಿಷ್ಯಗಳ ಹುಡುಕಾಟ ಅಥವಾ ಡೌನ್ಲೋಡ್ ಗೆ ಅಡೆತಡೆಯುಂಟು ಮಾಡುತ್ತವೆ. ಇದು ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಎಲ್ಲರಿಗೂ ಈ ಸಮಸ್ಯೆ ಕಾಡುತ್ತದೆ. ವಿಶ್ವದಾದ್ಯಂತ ಐಟಿ ತಜ್ಞರು ಈ ಸಮಸ್ಯೆ ಬಗೆಹರಿಸುವ ಪ್ರಯತ್ನದಲ್ಲಿ ಸೋತಿದ್ದಾರೆ. ಅಂತಿಮವಾಗಿ, ಭಾರತೀಯರು ಕಳುಹಿಸುವ ಶುಭೋದಯ, ಶುಭರಾತ್ರಿ ಸಂದೇಶಗಳು ಇದಕ್ಕೆ ಕಾರಣ ಎಂಬುದು ಗೊತ್ತಾಗಿದೆ.

ಭಾರತದಲ್ಲಿ ಸುಮಾರು 400 ಮಿಲಿಯನ್ ಜನರು ವಾಟ್ಸಾಪ್ ಬಳಸುತ್ತಾರೆ. ಕೋಟಿಗಟ್ಟಲೆ ಜನರು ಮುಂಜಾನೆ ಒಬ್ಬರಿಗೊಬ್ಬರು ಶುಭೋದಯ ಸಂದೇಶಗಳನ್ನು ಕಳುಹಿಸುತ್ತಾರೆ.

ಭಾರತದಲ್ಲಿ, ಕಳೆದ 5 ವರ್ಷಗಳಲ್ಲಿ, ಅಂತರ್ಜಾಲದಲ್ಲಿ ಶುಭೋದಯ ಸಂದೇಶ, ಚಿತ್ರಗಳನ್ನು ಹುಡುಕುವವರ ಸಂಖ್ಯೆ 10 ಪಟ್ಟು ಹೆಚ್ಚಾಗಿದೆ. ಸಂದೇಶ, ಫೋಟೋ ಡೌನ್‌ಲೋಡ್ ಮಾಡುವವರ ಸಂಖ್ಯೆ 9 ಪಟ್ಟು ಹೆಚ್ಚಾಗಿದೆ.

ಈ ಫೋಟೋಗಳನ್ನು ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಲಾಗುತ್ತದೆ. ಇದ್ರಿಂದ ಮೊಬೈಲ್ ಸಂಗ್ರಹ ತುಂಬುತ್ತದೆ. ಮೊಬೈಲ್ ನಲ್ಲಿರುವ ಅನವಶ್ಯಕ ಫೋಟೋಗಳನ್ನು ಒಂದೇ ಬಾರಿ ಡಿಲಿಟ್ ಮಾಡುವ ಅಪ್ಲಿಕೇಷನ್ ಡೌನ್ಲೋಡ್ ಮಾಡಿ. ಹಾಗೆ ಅನವಶ್ಯಕವಾಗಿ ಫೋಟೋ, ಸಂದೇಶ ಕಳುಹಿಸುವುದನ್ನು ತಪ್ಪಿಸಿ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...