alex Certify ಅಜ್ಜನ ನೋಡಿ ಭಾವುಕನಾದ ಮೊಮ್ಮಗ: ನೆಟ್ಟಿಗರಿಗೆ ಕಣ್ಣೀರು ತರಿಸುವ ಮನ ಮಿಡಿಯುವ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜನ ನೋಡಿ ಭಾವುಕನಾದ ಮೊಮ್ಮಗ: ನೆಟ್ಟಿಗರಿಗೆ ಕಣ್ಣೀರು ತರಿಸುವ ಮನ ಮಿಡಿಯುವ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ ಲಕ್ಷಾಂತರ ಕಿರು ವಿಡಿಯೋಗಳು ಶೇರ್​ ಆಗುತ್ತವೆ. ಅವುಗಳಲ್ಲಿ ಕೆಲವು ನಕ್ಕು ನಗಿಸಿದರೆ, ಕೆಲವೊಂದು ಕಣ್ಣೀರು ಹಾಕುವಂತೆ ಮಾಡುತ್ತದೆ. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ವೈರಲ್​ ಆಗಿದ್ದು, ಬಾಲಕನಿಗೆ ಅಜ್ಜ ಕೊಟ್ಟ ಸರ್​ಪ್ರೈಸ್​ ಇದು ಒಳಗೊಂಡಿದೆ.

33 ಸೆಕೆಂಡ್‌ಗಳ ಈ ವಿಡಿಯೋ ಅನ್ನು ಇನ್‌ಸ್ಟಾಗ್ರಾಮ್ ಬಳಕೆದಾರ ಎಬಿಟಾಪಿಯಾ ಶೇರ್​ ಮಾಡಿದ್ದಾರೆ. ಈ ವಿಡಿಯೋ ನೋಡಿ ಹಲವರು ಭಾವುಕರಾಗಿದ್ದಾರೆ.

ಈ ವಿಡಿಯೋದಲ್ಲಿ ಬಾಲಕನೊಬ್ಬ ಆಟದಲ್ಲಿ ನಿರತನಾಗಿರುವುದನ್ನು ನೋಡಬಹುದು. ಈ ನಿರ್ದಿಷ್ಟ ಕ್ಷಣವನ್ನು ಫುಟ್ಬಾಲ್ ಮೈದಾನದಲ್ಲಿ ದಾಖಲು ಮಾಡಲಾಗಿದೆ. ಬಾಲಕನನ್ನು ಅಚ್ಚರಿಗೊಳಿಸಲು ಆತನ ಅಜ್ಜ, ಅವನ ಬಳಿ ಬರುತ್ತಾನೆ. ಸರ್​ಪ್ರೈಸ್​ ಆಗಿ ಬರಬೇಕು ಎಂದು ಅಜ್ಜ ಅಂದುಕೊಂಡಿರುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ದೂರದಿಂದಲೇ ಮೊಮ್ಮಗ ಅಜ್ಜನನ್ನು ನೋಡುತ್ತಾನೆ.

ಅಜ್ಜನನ್ನು ನೋಡಿದ್ದೇ ತಕ್ಷಣ ಓಡಿಬಂದು ಆತನನ್ನು ಅಪ್ಪುತ್ತಾನೆ. ಇಬ್ಬರೂ ಆನಂದಬಾಷ್ಪ ಹರಿಸುತ್ತಾರೆ. ಅಜ್ಜ ಮತ್ತು ಮೊಮ್ಮಗನ ಈ ಕ್ಷಣ ನೋಡಿ ಹಲವು ಕಮೆಂಟಿಗರು ತಮ್ಮ ಅಜ್ಜನನ್ನು ನೆನಪಿಸಿಕೊಂಡಿದ್ದಾರೆ. ತಾವೂ ಭಾವುಕರಾಗಿರುವ ಬಗ್ಗೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...