alex Certify ಹೊಸ ಕೆಲಸ ಸಿಕ್ಕಿತು ಎಂದು ಹೇಳಿದ ಪುತ್ರಿಗೆ ಭರ್ಜರಿ ಕೌಂಟರ್​ ಕೊಟ್ಟ ತಂದೆ..! ಟ್ವೀಟ್​​ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಕೆಲಸ ಸಿಕ್ಕಿತು ಎಂದು ಹೇಳಿದ ಪುತ್ರಿಗೆ ಭರ್ಜರಿ ಕೌಂಟರ್​ ಕೊಟ್ಟ ತಂದೆ..! ಟ್ವೀಟ್​​ ವೈರಲ್​

ಪೋಷಕರನ್ನ ತೃಪ್ತಿ ಪಡಿಸೋದು ಅಂದರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಇದೇ ರೀತಿ ಹೊಸ ಕೆಲಸವೊಂದಕ್ಕೆ ಸೇರಿದ ಯುವತಿ ಫ್ಯಾಮಿಲಿ ಗ್ರೂಪ್​​ನಲ್ಲಿ ಈ ಖುಷಿಯ ವಿಚಾರವನ್ನ ಶೇರ್​ ಮಾಡಿದ್ದಳು. ಈ ವಿಚಾರಕ್ಕೆ ಆಕೆಯ ತಂದೆಯು ನೀಡಿದ ರಿಪ್ಲೈ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿದೆ.

ಕೆನಡಾದ ಟೊರ್ನೊಟೋ ನಿವಾಸಿಯಾಗಿರುವ ನೇಹಾ ಫ್ಯಾಮಿಲಿ ಗ್ರೂಪ್​​ನ ಸ್ಕ್ರೀನ್​ಶಾಟ್​ನ್ನು ಶೇರ್​ ಮಾಡಿದ್ದಾರೆ. ಹೊಸ ಕೆಲಸ ಸಿಕ್ಕಿದೆ ಎಂದು ತಂದೆಗೆ ಹೇಳಿದ್ದೆ, ಅವರ ಪ್ರತಿಕ್ರಿಯೆ ಹೀಗಿರಬಹುದೇ..? ಎಂದು ಆಕೆ ಈ ಸ್ಕ್ರೀನ್​ಶಾಟ್​ಗೆ ಶೀರ್ಷಿಕೆ ನೀಡಿದ್ದಾಳೆ.

ಖುಷಿಯ ವಿಚಾರವನ್ನ ಫ್ಯಾಮಿಲಿ ಗ್ರೂಪ್​ನಲ್ಲಿ ಶೇರ್​ ಮಾಡಿದ್ದ ನೇಹಾ, ನಿಮ್ಮಲ್ಲರ ಬೆಂಬಲವಿಲ್ಲದೇ ಇದು ಸಾಧ್ಯವಿಲ್ಲ, ನಿಮ್ಮನ್ನೆಲ್ಲ ಪ್ರೀತಿಸುತ್ತೇನೆ ಎಂದು ಮೆಸೇಜ್​ ಮಾಡಿದ್ದರು. ಈ ಮೆಸೇಜ್​ಗೆ ಆಕೆಯ ತಂದೆ ರಿಲ್ಯಾಕ್ಸ್​ ನೇಹಾ, ನೀನೇನು ಆಸ್ಕರ್​​​ ಪ್ರಶಸ್ತಿಯನ್ನ ಗೆದ್ದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಟ್ವಿಟರ್​ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈಗಾಗಲೇ 4.3 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ 32 ಸಾವಿರಕ್ಕೂ ಹೆಚ್ಚು ರಿ ಟ್ವೀಟ್​ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...