alex Certify ಅಬ್ಬಬ್ಬಾ ಈ ಪ್ರೇತ ಪಕ್ಷಿಯೇ…..! ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ ಈ ಪ್ರೇತ ಪಕ್ಷಿಯೇ…..! ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು

ಕಾಡು ಪ್ರಾಣಿಗಳು ಅಥವಾ ಪಕ್ಷಿಗಳು ಎಂದಿಗೂ ಮಾನವಕುಲವನ್ನು ವಿಸ್ಮಯಗೊಳಿಸುತ್ತಲೇ ಇರುತ್ತವೆ. ಇಂದಿನ ಡಿಜಿಟಲ್​ ಯುಗಕ್ಕೆ ಧನ್ಯವಾದಗಳು. ಏಕೆಂದರೆ ಅತಿ ವಿಸ್ಮಯ ಲೋಕವನ್ನು ನಾವು ಮನೆಯಲ್ಲಿಯೇ ಕುಳಿತು ನೋಡಲು ಇದು ಸಹಾಯ ಮಾಡಿದೆ.

ಅಂಥದ್ದೇ ಒಂದು ಕುತೂಹಲದ ವಿಡಿಯೋ ವೈರಲ್​ ಆಗಿದೆ. ವೈರಲ್ ವಿಡಿಯೋದಲ್ಲಿ ಮರಿ ಹಕ್ಕಿಯನ್ನು ನೀವು ನೋಡಬಹುದು. ಕೆಲವು ಹಕ್ಕಿಗಳು ಸುತ್ತಲಿನ ಪರಿಸರಕ್ಕೆ ತಕ್ಕಂತೆ ತಮ್ಮ ಬಣ್ಣವನ್ನು ಬದಲಾಯಿಸಿಕೊಳ್ಳುವ ಪವಾಡವನ್ನು ಹೊಂದಿವೆ. ಅಂಥದ್ದೇ ಒಂದು ವಿಡಿಯೋ ಇದಾಗಿದೆ. ಈ ಪಕ್ಷಿಯನ್ನು ಉರುಟೌ ಎಂದು ಗುರುತಿಸಲಾಗಿದೆ, ಇದನ್ನು ಪ್ರೇತ ಪಕ್ಷಿ ಎಂದೂ ಕರೆಯುತ್ತಾರೆ.

ಕಾಂಡ ಮತ್ತು ಪ್ರೇತ ಪಕ್ಷಿಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಹಕ್ಕಿಯ ಗರಿಗಳು ಅದರ ಪರಿಸರದ ಬಣ್ಣಕ್ಕೆ ಹೋಲುತ್ತವೆಯಾದರೂ, ಅದು ತನ್ನ ಮುಖವನ್ನು ಆಕಾಶಕ್ಕೆ ತೋರಿಸುವುದನ್ನು ನೋಡಬಹುದು, ಈ ವಿಡಿಯೋದಲ್ಲಿ ಮೊದಲು ಮರ ಮಾತ್ರ ಕಾಣಬಹುದು. ನಂತರ ಒಬ್ಬ ವ್ಯಕ್ತಿ ಮುಟ್ಟಿದಾಗಲೇ ಗೊತ್ತಾಗುವುದು, ಅಲ್ಲೊಂದು ಹಕ್ಕಿಯ ಮರಿ ಇದೆ ಎಂದು. ಇನ್ನೂ ಅಚ್ಚರಿಯ ವಿಷಯವೆಂದರೆ ಆ ಮರಿ ಹಕ್ಕಿಯ ಪಕ್ಕ ಇರುವುದು ಮರದ ಕಾಂಡವಲ್ಲ, ಬದಲಿಗೆ ಅದರ ಅಮ್ಮ ಎಂದು ತಿಳಿಯುವುದು ಕೂಡ ಆ ಹಕ್ಕಿಯನ್ನು ಮುಟ್ಟಿದಾಗ ಅದು ಚಲಿಸುವುದನ್ನು ನೋಡಿದಾಗಲೇ! ಪ್ರಕೃತಿಯ ಈ ವಿಸ್ಮಯಕ್ಕೆ ನೆಟ್ಟಿಗರು ಬೆರಗಾಗುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...