alex Certify ಅಡುಗೆ ಮನೆಯಲ್ಲಿರೋ ಈ ಮಸಾಲೆಯನ್ನು ಜೇನುತುಪ್ಪದೊಂದಿಗೆ ಬಳಸಿ ಇಳಿಸಬಹುದು ತೂಕ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯಲ್ಲಿರೋ ಈ ಮಸಾಲೆಯನ್ನು ಜೇನುತುಪ್ಪದೊಂದಿಗೆ ಬಳಸಿ ಇಳಿಸಬಹುದು ತೂಕ !

ಮೆಂತ್ಯ ಮತ್ತು ಜೇನುತುಪ್ಪ ಇವೆರಡೂ ಆರೋಗ್ಯಕ್ಕೆ ವರದಾನವಿದ್ದಂತೆ. ಅನೇಕ ಕಾಯಿಲೆಗಳಿಗೆ ಇವು ಪರಿಣಾಮಕಾರಿ ಔಷಧಿಗಳು. ಬೀಟಾ-ಗ್ಲುಕೋಸಿನ್ ಮೆಂತ್ಯ ಬೀಜಗಳಲ್ಲಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ತ್ವರಿತವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದರಲ್ಲಿ ಕಂಡುಬರುವ ನಾರಿನಂಶವು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುವುದು ಮಾತ್ರವಲ್ಲದೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದಾಗಿ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಹಾಗೆಯೇ ಜೇನುತುಪ್ಪ ಕೂಡ ಹಲವು ಔಷಧೀಯ ಗುಣಗಳಿಂದ ಕೂಡಿದೆ. ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ಒದಗಿಸುವುದರ ಜೊತೆಗೆ, ವಯಸ್ಸಾಗುವಿಕೆಯನ್ನು ಇದು ತಡೆಯಬಲ್ಲದು. ಚರ್ಮಕ್ಕೆ ಹೊಳಪು ನೀಡುವುದು, ಜೀರ್ಣಕ್ರಿಯೆ ಸುಧಾರಣೆ ಹೀಗೆ ಅನೇಕ ಪ್ರಯೋಜನಗಳು ಜೇನುತುಪ್ಪದಲ್ಲಿವೆ.

ಮೆಂತ್ಯ ಮತ್ತು ಜೇನುತುಪ್ಪದ ಸಂಯೋಜನೆಯಿದ್ದರೆ ಆರೋಗ್ಯಕ್ಕೆ  ಅದ್ಭುತ ಪ್ರಯೋಜನಗಳು ದೊರೆಯುತ್ತವೆ. ಮೆಂತ್ಯ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ.

ತ್ವರಿತವಾಗಿ ತೂಕ ಇಳಿಕೆ – ಮೆಂತ್ಯ ಮತ್ತು ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸಿದರೆ, ಅದು ತ್ವರಿತವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯದಲ್ಲಿರುವ ನಾರಿನಂಶವು ಹೊಟ್ಟೆಯನ್ನು ಆರೋಗ್ಯವಾಗಿರಿಸುತ್ತದೆ ಮತ್ತು ತೂಕವನ್ನು ಬೇಗನೆ  ಕಡಿಮೆ ಮಾಡುತ್ತದೆ.

ಮಧುಮೇಹಿ ನಿಯಂತ್ರಣಕ್ಕೆ ಪ್ರಯೋಜನಕಾರಿಮೆಂತ್ಯ ಬೀಜಗಳು ಮತ್ತು ಜೇನುತುಪ್ಪದ ಸಂಯೋಜನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎರಡನ್ನೂ ಒಟ್ಟಿಗೆ ಸೇವಿಸುವುದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ನೈಸರ್ಗಿಕ ಪರಿಹಾರವಾಗಿದೆ.

ಹೃದಯದ ಆರೋಗ್ಯ ಕಾಪಾಡುತ್ತದೆ ಮೆಂತ್ಯ ಬೀಜಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಮೆಂತ್ಯದ ಜೊತೆಗೆ ಜೇನುತುಪ್ಪದ ಬಳಕೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಹಾಗಾಗಿ ಇವೆರಡರ ಕಾಂಬಿನೇಷನ್‌ ಹೃದಯವನ್ನು ಆರೋಗ್ಯವಾಗಿಡುತ್ತದೆ.

ಹೊಟ್ಟೆ ಸಮಸ್ಯೆಗೆ ಪರಿಹಾರಮೆಂತ್ಯ ಬೀಜಗಳು ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ನಿವಾರಿಸುತ್ತವೆ. ಈ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಜೇನು ಹೊಟ್ಟೆಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹ ಉಪಯುಕ್ತವಾಗಿದೆ. ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ದೇಹ ಶುದ್ಧಿಯಾಗುತ್ತದೆ.

ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿಮೆಂತ್ಯ ಬೀಜಗಳು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸುವುದು ಮಾನಸಿಕ ಆರೋಗ್ಯಕ್ಕೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇವೆರಡರ ಗುಣಗಳು ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...