alex Certify ಹುಟ್ಟುಹಬ್ಬದ ಸಂಭ್ರಮದಲ್ಲಿ ಯೋಗರಾಜ್ ಭಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಸಂಭ್ರಮದಲ್ಲಿ ಯೋಗರಾಜ್ ಭಟ್

Yogaraj Bhat - Public TV

ವಿಭಿನ್ನ ಶೈಲಿಯ ಹಾಡುಗಳನ್ನು ಬರೆಯುವ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿರುವ ಯೋಗರಾಜ್ ಭಟ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶನ ಸೇರಿದಂತೆ ನಿರ್ಮಾಪಕರಾಗಿ ಹಾಗೂ ಹಾಡು ಬರಹಗಾರರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. 2001ರಲ್ಲಿ ‘ಚಕ್ರ’ ಎಂಬ ಚಿತ್ರದ ಮೂಲಕ ನಿರ್ದೇಶನಕ್ಕಿಳಿದರು. ಮಣಿ, ರಂಗ ಎಸ್​ಎಸ್​ಎಲ್​ಸಿ, ‘ಮುಂಗಾರು ಮಳೆ’ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಬಹುಬೇಡಿಕೆಯ ನಿರ್ದೇಶಕರಾದರು.

ಯೋಗರಾಜ್ ಭಟ್ ಕಳೆದ ವರ್ಷ ‘ಗಾಳಿಪಟ 2’ ಚಿತ್ರವನ್ನು ನಿರ್ದೇಶಿಸಿದ್ದರು. ಇತ್ತೀಚಿಗೆ ‘ಸೌತ್ ಇಂಡಿಯನ್ ಹೀರೋ’ ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಯೋಗರಾಜ್ ಭಟ್ ಅವರಿಗೆ ಸ್ಯಾಂಡಲ್ವುಡ್ ನ ಹಲವಾರು ಕಲಾವಿದರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...