alex Certify ಮದುವೆಯ 50ನೇ ವಾರ್ಷಿಕೋತ್ಸವದಲ್ಲಿ ದಂಪತಿಯ ರೊಮಾಂಟಿಕ್​ ನೃತ್ಯ: ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯ 50ನೇ ವಾರ್ಷಿಕೋತ್ಸವದಲ್ಲಿ ದಂಪತಿಯ ರೊಮಾಂಟಿಕ್​ ನೃತ್ಯ: ನೆಟ್ಟಿಗರು ಫಿದಾ

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಶಾಶ್ವತ ಪ್ರೀತಿಯ ಭಾವನೆಯು ಕಣ್ಣು ಮಿಟುಕಿಸುವುದರಲ್ಲಿ ಬರುವುದಿಲ್ಲ ಎಂಬ ನಾಣ್ಣುಡಿ ಇದೆ. ಈ ಪರಿಶುದ್ಧ ಪ್ರೀತಿ ಎನ್ನುವಂಥ ವಿಡಿಯೋ ಒಂದು ವೈರಲ್​ ಆಗಿದ್ದು, ಅದೀಗ ನೆಟ್ಟಿಗರ ಗಮನ ಸೆಳೆದಿದೆ.

ಒಂದೆರಡು ವರ್ಷಗಳಲ್ಲಿಯೇ ದಾಂಪತ್ಯಕ್ಕೆ ಕೊನೆ ಹಾಡುವ ಎಷ್ಟೋ ಪ್ರಸಂಗಗಳು ನಡೆಯುತ್ತಿರುವ ನಡುವೆ, ಮದುವೆಯಾದ 50 ವರ್ಷಗಳ ನಂತರ ವಯಸ್ಸಾದ ದಂಪತಿ ಒಟ್ಟಿಗೇ ಕೈಕೈ ಜೋಡಿಸಿಕೊಂಡು ನೃತ್ಯ ಮಾಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ನಿಮ್ಮ ಅಜ್ಜ ನಿಮ್ಮ ಇಡೀ ಕುಟುಂಬದ ಮುಂದೆ ನಿಮ್ಮ ಅಜ್ಜಿಗೆ ರೊಮ್ಯಾಂಟಿಕ್ ಹಾಡನ್ನು ಅರ್ಪಿಸುವುದನ್ನು ನೋಡಲು ಸುಂದರವಾಗಿಲ್ಲವೇ ಎಂದು ಕೇಳುವ ಮೂಲಕ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದೆ.

ಪಾರ್ಟಿಯೊಂದರಲ್ಲಿ ಸಿಖ್ ದಂಪತಿ ಮಾಡಿರುವ ಡಾನ್ಸ್​ ಇದಾಗಿದೆ. ಇತ್ತೀಚೆಗೆ ರೈಲಿನಲ್ಲಿ ವಯಸ್ಸಾದ ದಂಪತಿ ಹಲವು ಸೆಲ್ಫೀ ತೆಗೆದುಕೊಳ್ಳುವುದು ವೈರಲ್​ ಆಗಿತ್ತು. ಇದೀಗ ನೃತ್ಯ ಮಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್​ ಆಗಿದ್ದು, ಇಂಥ ಘಟನೆಗಳು 2022 ಅನ್ನು ನೆನಪಿಡುವ ವರ್ಷವಾಗಿಸುತ್ತಿವೆ.

ವಿಡಿಯೋದಲ್ಲಿ, ಸಿಖ್ ವ್ಯಕ್ತಿ ಮತ್ತು ಅವರ ಪತ್ನಿ ಲತಾ ಮಂಗೇಶ್ಕರ್ ಅವರ ಇಂತಕಾಮ್ ಚಲನಚಿತ್ರದ ‘ಆ ಜಾನೇ ಜಾನ್’ ಗೆ ನೃತ್ಯ ಮಾಡುವುದನ್ನು ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...