alex Certify ಇಲ್ಲಿದೆ ಲಕ್ಷ ರೂ. ಒಳಗೆ ಸಿಗುವ ಟಾಪ್ ಬೈಕ್‌ ಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಲಕ್ಷ ರೂ. ಒಳಗೆ ಸಿಗುವ ಟಾಪ್ ಬೈಕ್‌ ಗಳ ಪಟ್ಟಿ

ದೇಶದ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳ ಭರಾಟೆಗೆ ಕೋವಿಡ್‌ ಕಾಟದಿಂದ ಯಾವ ಪರಿಣಾಮವೂ ಆದಂತೆ ಕಾಣುತ್ತಿಲ್ಲ. ಹೊಸ ಮಾಡೆಲ್‌ ಬೈಕ್‌ಗಳು ಮಾರುಕಟ್ಟೆಗೆ ಬರುವುದು ಕಡಿಮೆ ಏನೂ ಆಗಿಲ್ಲ.

ಒಂದು ಲಕ್ಷ ರೂಪಾಯಿ ಬಜೆಟ್‌ನಲ್ಲಿ ಸದ್ಯದ ಮಟ್ಟಿಗೆ ಭಾರತದಲ್ಲಿ ಸಿಗುವ ಟಾಪ್ 5 ಬೈಕ್‌ಗಳ ಕುರಿತು ಒಮ್ಮೆ ನೋಡೋಣ:

1. ಟಿವಿಎಸ್‌ ರೇಡರ್‌

125 ಸಿಸಿ ವರ್ಗದಲ್ಲಿ ಬಹುದಿನಗಳ ಬಳಿಕ ಹೊಸ ಮಾಡೆಲ್‌ ಅನ್ನು ಟಿವಿಎಸ್ ಹೊರತಂದಿದೆ. ಬಜಾಜ್‌ನ ಎನ್‌ಎಸ್‌ 125ರ ಹಾದಿಯಲ್ಲೇ ಸಾಗಿರುವ ಟಿವಿಎಸ್, ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಹೊರತಂದಿರುವ ರೇಡರ್‌‌ 124.8 ಸಿಸಿ ಬಿಎಸ್‌6 ಇಂಜಿನ್‌ ಹೊಂದಿದ್ದು, 11.2 ಬಿ.ಹೆಚ್.ಪಿ ಮತ್ತು 11.2 ಎಂಎಮ್‌ ಟಾರ್ಕ್ ಶಕ್ತಿಯನ್ನು ಉತ್ಪಾದಿಸಬಲ್ಲದು.

2. ಬಜಾಜ್ ಪಲ್ಸರ್‌ 125

ಕೈಗೆಟುಕುವ ದರದಲ್ಲಿ ಪ್ರಾಕ್ಟಿಕಲ್ ಆಗಿರುವ ಮೋಟರ್‌ ಸೈಕಲ್ ಒಂದನ್ನು ನೋಡುವ ಮಂದಿಗೆ ಬಜಾಜ್‌ನ ಪಲ್ಸರ್‌ 125 ಒಂದು ಆಯ್ಕೆಯಾಗಿದೆ. ಪ್ರತಿನಿತ್ಯದ ಓಡಾಟಕ್ಕೆ ಹೇಳಿ ಮಾಡಿಸಿದ ಈ ಬೈಕ್‌‌ ತನ್ನ 150ಸಿಸಿ ಸಹೋದರನಂತಯೇ ಇದೆ. 150ಸಿಸಿಯ ಬೈಕ್‌ಗಿಂತ 125ಸಿಸಿಯ ಪಲ್ಸರ್‌ ಇಂಧನ ಕ್ಷಮತೆಯಲ್ಲಿ ಉತ್ತಮವಾಗಿದೆ. ಪಲ್ಸರ್‌ 150ಸಿಸಿಗಿಂತ 4 ಕೆಜಿ ಕಡಿಮೆ ತೂಕವಿರುವ ಪಲ್ಸರ್‌ 125 ನಿಮಗೆ ಅದೇ ಸ್ಟೈಲಿಂಗ್ ವಿನ್ಯಾಸದೊಂದಿಗೆ ಇನ್ನಷ್ಟು ಆರಾಮದಾಯಕ ರೈಡ್ ನೀಡಲಿದೆ.

ಭಾರತದಲ್ಲಿ ಮಾರಾಟವಾಗಲಿದೆ ಟೆಸ್ಲಾದ ಈ ಮೂರು ಎಲೆಕ್ಟ್ರಿಕ್ ಕಾರ್

3. ಬಜಾಜ್ ಎನ್‌ಎಸ್‌ 125

ಬಜಾಜ್ ಪಲ್ಸರ್‌ ಎನ್‌ಎ‌ಸ್‌ 125ನ ಆರಂಭಿಕ ಬೆಲೆ 99,192 ರೂ.ಗಳು. ಸದ್ಯದ ಮಟ್ಟಿಗೆ ಈ ಬೈಕ್ ಒಂದೇ ಅವತರಣಿಕೆಯಲ್ಲಿ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. 124.45 ಸಿಸಿ ಬಿಎಸ್‌6 ಇಂಜಿನ್‌ನಿಂದ 11.6 ಬಿಎಚ್‌ಪಿ ಮತ್ತು 11 ಎನ್‌ಎಂ ಟಾರ್ಕ್ ಶಕ್ತಿ ಪಡೆಯುತ್ತದೆ ಈ ಬೈಕ್. ಮುಂದಿನ ಚಕ್ರಕ್ಕೆ ಡಿಸ್ಕ್ ಹಾಗೂ ಹಿಂದಿನ ಚಕ್ರಕ್ಕೆ ಡ್ರಮ್ ಬ್ರೇಕ್‌ ಗಳನ್ನು ನೀಡಲಾಗಿದೆ. ಎರಡೂ ಚಕ್ರಗಳಿಗೆ ಸಮಗ್ರ ಬ್ರೇಕಿಂಗ್ ವ್ಯವಸ್ಥೆಯನ್ನು ಬಜಾಜ್ ಪಲ್ಸರ್‌ ಎನ್‌ಎಸ್‌ 125 ಹೊಂದಿದ್ದು, 144ಕೆಜಿ ತೂಕದೊಂದಿಗೆ 12 ಲೀಟರ್‌ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

4. ಹೋಂಡಾ ಎಸ್‌ಪಿ 125

ಸಿಬಿ ಶೈನ್ ಎಸ್‌ಪಿಯ ಮುಂದುವರೆದ ಭಾಗವಾದ ಎಸ್‌ಪಿ 125 ಬಿಎಸ್‌6 ಇಂಜಿನ್‌ನೊಂದಿಗೆ ಹೋಂಡಾ ಮೊದಲ ಬಾರಿಗೆ ಬಿಟ್ಟ ಮೋಟರ್‌ ಸೈಕಲ್ ಆಗಿದೆ. ಪ್ರೀಮಿಯಂ ಲುಕ್‌ನೊಂದಿಗೆ ಬರುವ ಎಸ್‌ಪಿ 125ನಲ್ಲಿ ಮುಂಭಾಗದಲ್ಲಿ ಡ್ರಮ್ ಬ್ರೇಕ್‌ ಅಥವಾ ಡಿಸ್ಕ್ ಬ್ರೇಕ್‌ಗಳ ಪ್ರತ್ಯೇಕ ಆಯ್ಕೆಗಳನ್ನು ಕೊಡಮಾಡುತ್ತದೆ.

124ಸಿಸಿ ಬಿಎಸ್‌6 ಇಂಜಿನ್‌ನಿಂದ 10.72 ಬಿಎಚ್‌ಪಿ ಮತ್ತು 10.9 ಎನ್‌ಎಂ ಟಾರ್ಕ್ ಶಕ್ತಿ ಪಡೆಯುವ ಎಸ್‌ಪಿ 125, ಎರಡೂ ಚಕ್ರಗಳಿಗೆ ಸಮಗ್ರ ಬ್ರೇಕಿಂಗ್ ವ್ಯವಸ್ಥೆ ಹೊಂದಿದೆ. ಈ ಬೈಕ್ 117 ಕೆಜಿ ತೂಕವಿದ್ದು, 11 ಲೀಟರ್‌ನಷ್ಟು ಇಂಧನ ಟ್ಯಾಂಕ್ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...