alex Certify ಎರಡು ಹೊಸ ಬಣ್ಣಗಳಲ್ಲಿ ಯಮಹಾ FZS 25 ಲಾಂಚ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಹೊಸ ಬಣ್ಣಗಳಲ್ಲಿ ಯಮಹಾ FZS 25 ಲಾಂಚ್‌

ಯಮಹಾ ಮೋಟಾರ್ಸ್ ತನ್ನ ಕ್ವಾರ್ಟರ್-ಲೀಟರ್ ಸ್ಟ್ರೀಟ್‌ ಫೈಟರ್ ಬೈಕ್‌ಗಾಗಿ MY2022 ನವೀಕರಣಗಳನ್ನು ಹೊಸ ಬಣ್ಣದ ಆಯ್ಕೆಗಳ ರೂಪದಲ್ಲಿ ಬಿಡುಗಡೆ ಮಾಡಿದೆ.

ಎರಡು ರೂಪಾಂತರಗಳಲ್ಲಿ ಲಭ್ಯವಿರುವ 2022 ಯಮಹಾ FZS 25 ಹೊಸ ಮ್ಯಾಟ್ ಕಾಪರ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳನ್ನು ಪಡೆದಿದೆ. ಆದರೆ FZ 25ನ ಬಣ್ಣದ ರೋಸ್ಟರ್‌ನಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಯಾಂತ್ರಿಕವಾಗಿ ಯಾವುದೇ ಬದಲಾವಣೆಗಳಿಲ್ಲ, ಅಥವಾ ಯಾವುದೇ ಹೊಸ ವೈಶಿಷ್ಟ್ಯ ಈ ಬೈಕ್‌ ಗಳಿಗೆ ಸೇರ್ಪಡೆಯಾಗಿಲ್ಲ. FZ 25ನ ಬೆಲೆ ರೂ 1.39 ಲಕ್ಷ ಮತ್ತು FZS 25 ರೂ 1.43 ಲಕ್ಷ ರೂ. ಇದೆ (ಎರಡೂ ಬೆಲೆಗಳು ಎಕ್ಸ್ ಶೋ ರೂಂನಲ್ಲಿ).

BIG NEWS: ಕೋವಿಡ್ ಕೇಸ್ ಹೆಚ್ಚಾದರೆ ಲಾಕ್ ಡೌನ್ ಅನಿವಾರ್ಯ; ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ

ಮೋಟಾರ್‌ ಸೈಕಲ್‌ಗಳು FZS 25 ನಲ್ಲಿ ಹೊಸ ಬಣ್ಣಗಳನ್ನು ಹೊರತುಪಡಿಸಿ ಎರಡೂ ಬೈಕ್‌ಗಳಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಎರಡರಲ್ಲೂ ಇನ್ನೂ ಸ್ಪ್ಲಿಟ್ ಡಿಆರ್‌ಎಲ್‌ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್ ವಿನ್ಯಾಸ ಮುಂದುವರೆದಿದೆ. FZS ನಿಮ್ಮ ಕೈಗಳನ್ನು ಸುರಕ್ಷಿತವಾಗಿರಿಸಲು ಎತ್ತರದ ವೈಸರ್ ಮತ್ತು ಬ್ರಷ್ ಗಾರ್ಡ್ ಅನ್ನು ಪಡೆದುಕೊಂಡಿದೆ. FZ 25 ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ಕಪ್ಪು ಬಣ್ಣಗಳಲ್ಲಿ ಮಾರಾಟವಾಗುವುದನ್ನು ಮುಂದುವರೆಸಿದ್ದು, ಮಾನ್ಸ್ಟರ್ ಎನರ್ಜಿ ಮೋಟೋಜಿಪಿ ಆವೃತ್ತಿಯ ಆಯ್ಕೆಯೂ ಸಹ ಕೊಡಮಾಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...