alex Certify ಬೆಚ್ಚಿಬೀಳಿಸುವಂತಿದೆ ಈ ಸುದ್ದಿ: ಮಾಸ್ಕ್‌ ಧರಿಸಿ ಓಡುವಾಗಲೇ ಕುಸಿದುಬಿದ್ದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಈ ಸುದ್ದಿ: ಮಾಸ್ಕ್‌ ಧರಿಸಿ ಓಡುವಾಗಲೇ ಕುಸಿದುಬಿದ್ದ ಯುವಕ

ವಿಶ್ವದಲ್ಲಿ ಕೊರೊನಾ ಕಾಲಿಟ್ಟಾಗಿನಿಂದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಜೀವನದ ಅವಿಭಾಜ್ಯ ಅಂಗವಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ ಡೌನ್‌ ಸೇರಿದಂತೆ ಆನೇಕ ಕಠಿಣ ಕ್ರಮಗಳನ್ನು ಕೈಗೊಂಡರೂ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿಲ್ಲ.

ಇದರ ಮಧ್ಯೆ ಕೊರೊನಾ ಉಗಮ ಸ್ಥಾನವಾದ ಚೀನಾದ ವುಹಾನ್‌ ನಗರದಲ್ಲಿ ನಡೆದಿರುವ ಘಟನೆಯೊಂದು ಬೆಚ್ಚಿಬೀಳಿಸುವಂತಿದೆ. 26 ವರ್ಷದ ಯುವಕನೊಬ್ಬ ಮಾಸ್ಕ್‌ ಧರಿಸಿ ರನ್ನಿಂಗ್‌ ಮಾಡುವಾಗಲೇ ಕುಸಿದುಬಿದ್ದಿದ್ದಾನೆ. ಆತನನ್ನು ಕೂಡಲೇ ವುಹಾನ್‌ ಸೆಂಟ್ರಲ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಎಡಭಾಗದ ಶ್ವಾಸಕೋಶ ಶೇ. 90 ರಷ್ಟು ಸಂಕುಚಿತಗೊಂಡಿತ್ತಲ್ಲದೇ ಹೃದಯ ಬಲಭಾಗಕ್ಕೆ ಸ್ಥಳಾಂತರವಾಗಿದೆ.

ಯುವಕನಿಗೆ ಈ ಸಮಸ್ಯೆ ಎದುರಾಗಿರುವ ಕಾರಣ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಈಗ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇದರ ಹೊರತಾಗಿಯೂ ಯುವಕನ ಸ್ಥಿತಿ ಗಂಭೀರವಾಗಿದೆ. ಶ್ವಾಸಕೋಶ ಸಂಕುಚಿತಗೊಂಡಿರುವುದಕ್ಕೆ pneumothorax ಎಂದು ಹೇಳಲಾಗಿದ್ದು, ಶ್ವಾಸಕೋಶ ಹಾಗೂ ಎದೆ ಭಾಗದ ನಡುವೆ ಗಾಳಿ ತುಂಬಿಕೊಂಡಿರುವುದು ಇದಕ್ಕೆ ಕಾರಣವೆನ್ನಲಾಗಿದೆ.

ಆರೋಗ್ಯ ತಜ್ಞರ ಪ್ರಕಾರ ಈ ಘಟನೆ ಸಂಭವಿಸಲು ಯುವಕ ಮಾಸ್ಕ್‌ ಧರಿಸಿ ರನ್ನಿಂಗ್‌ ಮಾಡುತ್ತಿದ್ದುದೇ ಕಾರಣವೆನ್ನಲಾಗಿದೆ. ವುಹಾನ್‌ ಸೆಂಟ್ರಲ್‌ ಆಸ್ಪತ್ರೆ ವೈದ್ಯ Chen Baojun ಪ್ರಕಾರ ಯುವಕನ ಅತಿ ಎತ್ತರವೂ ಈ ಮೊದಲೇ ಒಂದಷ್ಟು ಸಮಸ್ಯೆಗೆ ಕಾರಣವಾಗಿರಬಹುದು ಎಂದಿದ್ದಾರೆ. ಈ ಹಿಂದೆ ಕೆಲ ವಾರಗಳ ಅಂತರದಲ್ಲಿ ಇಬ್ಬರು ಹುಡುಗರು ಮಾಸ್ಕ್‌ ಧರಿಸಿ ಜಿಮ್‌ ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದರು. ಈ ಪೈಕಿ ಓರ್ವ ಬಾಲಕನ ಮರಣೋತ್ತರ ಪರೀಕ್ಷೆ ವೇಳೆ ಹಠಾತ್‌ ಹೃದಯಾಘಾತ ಸಾವಿಗೆ ಕಾರಣವೆಂದು ನಮೂದಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...