alex Certify ತನ್ನದಲ್ಲದ ತಪ್ಪಿಗೆ ಶಿಕ್ಷೆಗೊಳಗಾದ ಬುಡಕಟ್ಟು ವ್ಯಕ್ತಿಗೆ 13 ವರ್ಷದ ಬಳಿಕ ಬಿಡುಗಡೆ ಭಾಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನದಲ್ಲದ ತಪ್ಪಿಗೆ ಶಿಕ್ಷೆಗೊಳಗಾದ ಬುಡಕಟ್ಟು ವ್ಯಕ್ತಿಗೆ 13 ವರ್ಷದ ಬಳಿಕ ಬಿಡುಗಡೆ ಭಾಗ್ಯ

ವೈದ್ಯನಾಗಿ ಸೇವೆ ಸಲ್ಲಿಸಬೇಕಾಗಿದ್ದ ಬುಡಕಟ್ಟು ಜನಾಂಗದ ಚಂದ್ರೇಶ್ ಮಾರ್ಸ್ಕೋಲ್ ಅವರಿಗೆ ಕೊನೆಗೂ ನ್ಯಾಯ ಸಿಕ್ಕಿತು. ಆದರೆ ಅದಕ್ಕಾಗಿ ಅವರು 13 ವರ್ಷ ಕಾಯಬೇಕಾಗಿ ಬಂತು. ಈಗ ಅವರಿಗೆ 36 ವರ್ಷ ವಯಸ್ಸು. ಅನ್ಯಾಯವಾಗಿ ಜೈಲು ಸೇರಿದ ಅವರು ಕಳೆದುಕೊಂಡದ್ದು ವೈದ್ಯ ವೃತ್ತಿಯನ್ನು, ಬದುಕಿನ ಪ್ರಮುಖ ಕಾಲಘಟ್ಟವನ್ನು…..

ಬಾಲಘಾಟ್ ಜಿಲ್ಲೆಯ ಮಾರ್ಸ್ಕೋಲ್ ಅವರನ್ನು ನಿರಪರಾಧಿ ಎಂದು ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಘೋಷಿಸಿ, ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದೆ. ಸದ್ಯದಲ್ಲೇ ಅವರು ಭೋಪಾಲ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ. ಬುಡಕಟ್ಟು ವ್ಯಕ್ತಿಗೆ ಜುಲೈ 2009 ರಲ್ಲಿ ಭೋಪಾಲ್ ನ್ಯಾಯಾಲಯದ ತಪ್ಪಿತಸ್ಥನೆಂದು ಘೋಷಿಸಿತು.

ಮಧ್ಯಪ್ರದೇಶ ಹೈಕೋರ್ಟ್‌ನ ಜಬಲ್‌ಪುರ ನ್ಯಾಯಪೀಠವು ಈ ತೀರ್ಪು ನೀಡಿದ್ದು, ಈ ಪ್ರಕರಣವು ದುರುದ್ದೇಶಪೂರಿತವಾಗಿದೆ. ಕಾನೂನು ಕ್ರಮದ ನಂತರ ಅತ್ಯಂತ ಚಾತುರ್ಯದೊಂದಿಗೆ ಪೂರ್ವಗ್ರಹ ಪೀಡಿತವಾಗಿ ತನಿಖೆಯ ಹಾದಿ ತಪ್ಪಿಸಲಾಗಿದೆ ಎಂಬುದು ವೇದ್ಯವಾಗುತ್ತದೆ. 2008 ರಲ್ಲಿ ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಯನ್ನು ಇದರಲ್ಲಿ ತಪ್ಪಾಗಿ ಸಿಲುಕಿಸುವ ಏಕೈಕ ಉದ್ದೇಶದಿಂದ ಪೊಲೀಸರು ಪ್ರಕರಣ ತಿರುಚಿರುವುದು ಕಂಡುಬಂದಿದೆ. ಬಹುಶಃ, ಇದು ಉದ್ದೇಶಪೂರ್ವಕವಾಗಿ ಪ್ರಾಸಿಕ್ಯೂಷನ್ ಸಾಕ್ಷಿ ಆಗಿದ್ದ ಡಾ ಹೇಮಂತ್ ವರ್ಮಾ (ಆಗ ಭೋಪಾಲ್‌ನ ಅದೇ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ನಿವಾಸಿ)ರನ್ನು ಬಚಾವ್‌ ಮಾಡಲು ಮಾಡಿದ ಕೃತ್ಯವಿರಬಹುದು ಎಂದು ಆದೇಶದಲ್ಲಿ ಹೇಳಿದೆ.

ತೀರ್ಪು ಪ್ರಕಟವಾದ 90 ದಿನಗಳ ಒಳಗೆ ಮಾರ್ಸ್ಕೋಲ್‌ಗೆ 42 ಲಕ್ಷ ರೂಪಾಯಿ ಪರಿಹಾರವನ್ನು ಪಾವತಿಸಲು ರಾಜ್ಯಕ್ಕೆ ಹೈಕೋರ್ಟ್ ಆದೇಶ ನೀಡಿತು. ವಿಫಲವಾದರೆ ಪಾವತಿಸುವವರೆಗೆ ವರ್ಷಕ್ಕೆ ಒಂಬತ್ತು ಪ್ರತಿಶತದಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. 2008 ರ ಆಗಸ್ಟ್ 25ರಂದು ಮಾರ್ಸ್ಕೋಲ್‌ ಅವರ ಔಪಚಾರಿಕ ಬಂಧನದ ನಂತರ, 13 ವರ್ಷ ಜೈಲಿನಲ್ಲಿಯೇ ಮೊದಲು ವಿಚಾರಣಾಧೀನ ಕೈದಿಯಾಗಿ ಮತ್ತು ನಂತರ ಅಪರಾಧಿಯಾಗಿ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...